ಕನ್ನಡ ಚಿತ್ರರಂಗದ ಧೃವತಾರೆಗಳಲ್ಲಿ ಒಬ್ಬರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿನ್ನೆ ರಾತ್ರಿ ಅಸ್ತಂಗತರಾದ ನೋವಿನ ವಿಷಯ ರಾಜ್ಯಾದ್ಯಂತ ಶೋಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ಒಂದೆಡೆ ಅಗಲಿದ ನಟ ಹಾಗೂ ನಾಯಕನನ್ನು ನೋಡಲು ವಿವಿಧ ಕಡೆಗಳಿಂದ ಬರುತ್ತಿರುವ ಅಭಿಮಾನಿಗಳು, ಸಾರ್ವಜನಿಕರು, ಮತ್ತೊಂದೆಡೆ ದಕ್ಷಿಣದ ಚಿತ್ರರಂಗದ ಗಣ್ಯಾತಿಗಣ್ಯರು ಕೂಡಾ ಅಂಬರೀಶ್ ಅವರ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ. ಅಗಲಿದ ನಟನಿಗೆ ಅಶ್ರು ನಮನ, ನುಡಿ ನಮನವನ್ನು ಸಲ್ಲಿಸಿದ್ದಾರೆ ಅವರ ಪ್ರೀತಿ ಪಾತ್ರರಾದ ಹಾಗೂ ಆತ್ಮೀಯ ಗೆಳೆಯರೆಲ್ಲಾ. ಇನ್ನು ನಿನ್ನೆ ರಾತ್ರಿ ಅಂಬರೀಶ್ ಅವರು ನಿಧನರಾದಾಗ ಅವರ ಶರೀರವನ್ನು ಕೆಲವು ಕಾಲ ಅವರ ಹೊಸ ಮನೆಯಲ್ಲಿ ಇರಿಸಲಾಗಿತ್ತು.

ಅಂಬರೀಶ್ ಅವರು ಜೆ.ಪಿ‌.ನಗರದಲ್ಲಿರುವ ತಮ್ಮ ಮನೆ ಅಮರನಾಥ ನಿಲಯವನ್ನು ಕೆಡವಿ ಆ ಜಾಗದಲ್ಲಿ ಒಂದು ಐಶಾರಾಮಿ ಬಂಗಲೆಯನ್ನು ಕಟ್ಟಿಸುತ್ತಿದ್ದರು. ಅವರ ಅಮರನಾಥ ನಿಲಯದಲ್ಲಿ ಸ್ಟಾರ್ ನಟರಲ್ಲಿ ಮೊದಲ ಬಾರಿಗೆ ಮನೆಯಲ್ಲೇ ಲಿಫ್ಟ್ ಅಳವಡಿಸಿದ್ದವರು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಆದರೆ ಅಂತಹ ಮನೆಯನ್ನೇ ಕೆಡವಿ ಅದಕ್ಕಿಂತ ಅಂದವಾದ ಐಶಾರಾಮಿ ಬಂಗಲೆಯನ್ನು ಕಟ್ಟಿಸುತ್ತಿದ್ದರು. ಆ ಮನೆಯ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅಂಬರೀಶ್ ಅವರ ಹೊಸ ಬಂಗಲೆಯ ಕನಸು ನನಸಾಗುವ ಮೊದಲೇ ಅವರು ಎಲ್ಲರನ್ನೂ ತೊರೆದು ಹೋಗಿದ್ದಾರೆ.

ಆದರೆ ಅವರ ಪಾರ್ಥಿವ ಶರೀರವನ್ನು ಆ ಹೊಸ ಮನೆಯಲ್ಲಿ ಕೆಲವು ಕಾಲ ಇರಿಸಿ ಅವರ ಕೋರಿಕೆಯನ್ನು ತೀರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಆ ಸಂದರ್ಭದಲ್ಲಿ ಅಲ್ಲಿದ್ದ ನಟ ಯಶ್ ಹಾಗೂ ಇತರೆ ಗೆಳೆಯರು ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಅಲ್ಲಿಟ್ಟು ಆ ಅಪರೂಪದ ಕ್ಷಣಗಳನ್ನು ವಿಡಿಯೋ ಮಾಡಿ, ಅದರ ನೆನಪು ಯಾವಾಗಲೂ ಇರುವಂತೆ ಮಾಡಿದ್ದಾರೆ. ಅಂಬರೀಶ್ ಅವರು ಭೌತಿಕವಾಗಿ ಎಲ್ಲರನ್ನು ಅಗಲಿದ್ದರೂ ಕೂಡಾ ಮಾನಸಿಕವಾಗಿ ಅವರು ಎಲ್ಲರ ಮಧ್ಯೆಯೇ ಇದ್ದಾರೆ.ಆದರೆ

ರಾಕಿಂಗ್ ಸ್ಟಾರ್ ಯಶ್ ಅವರು ಅಂಬರೀಶ್ ಅವರ ಪಾರ್ಥಿವ ಶರೀರವನ್ನು ವೀಡಿಯೋ ಮಾಡಿಲ್ಲ.ಅಸಲಿ ಕಾರಣ ಏನೆಂದರೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಬ್ಬರಿಗೂ ಸಾಕಷ್ಟು ಪ್ರೀತಿ ಪಾತ್ರರಾಗಿದ್ದರು..ಮೊನ್ನೆ ಮೊನ್ನೆಯಷ್ಟೇ ನಡೆದ ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಭಾಗವಹಿಸಿ ರಾಧಿಕಾ ಪಂಡಿತ್ ಅವರಿಗೆ ಶುಭ ಹಾರೈಸಿದ್ದರು‌. ಈಗ

ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾದ ಸುದ್ದಿ ತಿಳಿದು ರಾಧಿಕಾ ಪಂಡಿತ್ ಅವರಿಗೆ ದಿಘ್ರಮೆಆಗಿದೆ. ಹೇಳಿಕೇಳಿ ರಾಧಿಕಾ ಪಂಡಿತ್ ಅವರು ಇದೀಗ ತುಂಬು ಗರ್ಭಿಣಿ. ಈ ಸಮಯದಲ್ಲಿ ಅಂಬರೀಶ್ ಅವರನ್ನು ಕಾಣಲು ರಾಧಿಕಾ ಪಂಡಿತ್ ಹಾತೊರೆದಿದ್ದಾರೆ.ಆದರೆ ಅಂಬರೀಶ್ ಅವರನ್ನು ಈಗ ರಾಧಿಕಾ ಪಂಡಿತ್ ಬಂದು ನೋಡಲು ಸಾಧ್ಯವಾಗದ ಕಾರಣ ರಾಧಿಕಾ ಪಂಡಿತ್ ಅವರಿಗೆ ಯಶ್ ಅವರು ವೀಡಿಯೋ ಕಾಲ್ ಮಾಡಿ ಅಂಬರೀಶ್ ಅವರನ್ನು ತೋರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here