Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಕ್ಟೋಬರ್‌ನಿಂದ ಜನನ, ಮರಣ ನೋಂದಣಿ ಕಾಯ್ದೆ ಜಾರಿ – ಇನ್ಮುಂದೆ ಈ ಎಲ್ಲಾ ಕೆಲಸಗಳಿಗೆ ಜನನ ಪತ್ರ ಬೇಕೆ ಬೇಕು..!

ದೇಶದಲ್ಲಿ ಅಕ್ಟೋಬರ್‌ 1ರಿಂದ ಜನನ ಮತ್ತು ಮರಣ ನೋಂದಣಿ ಕಾಯ್ದೆ 2023 ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಸಂಸತ್ತಿನಲ್ಲಿ, ಕಳೆದ ತಿಂಗಳು ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಜನನ ಮತ್ತು ಮರಣ ನೋಂದಣಿ ಮಸೂದೆಯನ್ನು ಎರಡೂ ಸದನಗಳು ಅಂಗೀಕರಿಸಿದ್ದವು. ಇದರಲ್ಲಿ 1969ರ ಕಾಯಿದೆಗೆ ತಿದ್ದುಪಡಿ ತರಬೇಕೆಂಬ ಬೇಡಿಕೆ ಇತ್ತು.

ಇನ್ಮುಂದೆ ಶಾಲೆ, ಕಾಲೇಜುಗಳಲ್ಲಿ ನೋಂದಣಿ ಸಂದರ್ಭದಲ್ಲಿ, ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಆಧಾರ್ ನೋಂದಣಿ, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುತ್ತದೆ.

ಜನನ ಮತ್ತು ಮರಣ ಪ್ರಮಾಣ ಪತ್ರ ಕಾಯ್ದೆ ಜಾರಿಯಾದ ನಂತರ ಆಧಾರ್‌ನಿಂದ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಜನನ ಪ್ರಮಾಣಪತ್ರದ ಪ್ರಾಮುಖ್ಯತೆಯೂ ಹೆಚ್ಚಾಗುತ್ತದೆ.

ಈ ಮಸೂದೆಯನ್ನು ಲೋಕಸಭೆಯಲ್ಲಿ ಆಗಸ್ಟ್ 1 ರಂದು ಮತ್ತು ರಾಜ್ಯಸಭೆಯಲ್ಲಿ 7 ಆಗಸ್ಟ್ 2023 ರಂದು ಅಂಗೀಕರಿಸಲಾಯಿತು. ಇದಾದ ಬಳಿಕ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 1ರಿಂದ ನಿಯಮಗಳನ್ನು ಜಾರಿಗೆ ತರುವುದಾಗಿ ಅಧಿಸೂಚನೆ ಹೊರಡಿಸಿದೆ.