ಅಕ್ಷರ್ ಪಟೇಲ್ ಗೆ ಫಿಟ್ನೆಸ್ ಸವಾಲು
![](https://suddimane.com/wp-content/uploads/2023/09/WhatsApp-Image-2023-09-20-at-2.20.32-PM.jpeg)
ನವದೆಹಲಿ: ಆಲ್ರೌಂಡರ್ ಅಕ್ಷರ್ ಪಟೇಲ್ಗೆ ವಿಶ್ವಕಪ್ ತಂಡ ಸೇರಿಕೊಳ್ಳುವ ಮುನ್ನ ಫಿಟ್ನೆಸ್ ಸಾಬೀತುಪಡಿಸುವ ಅನಿವಾರ್ಯತೆ ಎದುರಾಗಿದೆ.
ಏಷ್ಯಾಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡ ಅಕ್ಷರ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.
ಸೆ.28ರಒಳಗೆ ಅವರು ಫಿಟ್ ಆಗದೇ ಇದ್ದರೆ ಅವರು ವಿಶ್ವಕಪ್ ತಂಡದಿಂದ ಹೊರಬೀಳಲಿದ್ದಾರೆ ಎಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿದ್ದಾರೆ. ಅಕ್ಸರ್ ಫಿಟ್ ಆಗದಿದ್ದ ರೆ ಅಶ್ವಿನ್ ಅಥವಾ ಸುಂದರ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.