ಅತಿಯಾಗಿ ತಂಪು ಪಾನೀಯ ಸೇವಿಸುತ್ತೀರಾ..? – ಇನ್ನು ಮುಂದೆ ಇರಲಿ ಎಚ್ಚರ..!
ತೈವಾನ್: ತೈವಾನ್ ದೇಶದಲ್ಲಿ ಮಹಿಳೆಯೊಬ್ಬರ ದೇಹದ ಮೂತ್ರಪಿಂಡದಿಂದ ವೈದ್ಯರು 300ಕ್ಕೂ ಅಧಿಕ ಕಲ್ಲುಗಳನ್ನು ಹೊರತೆಗೆದಿದ್ದಾರೆ..! ಇದಕ್ಕೆ ಕಾರಣವೇನೆಂದರೆ ಈ ಮಹಿಳೆ ನೀರಿನ ಬದಲಾಗಿ ಪ್ರತಿದಿನವೂ ತಂಪು ಪಾನೀಯ(ಜ್ಯೂಸ್) ಗಳನ್ನೇ ಸೇವಿಸುತ್ತಿದ್ದರು.
ಈ ತಂಪು ಪಾನೀಯಗಳ ವಿಪರೀತ ಸೇವನೆಯಿಂದಾಗಿ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗಿಯ ದೇಹದ ಸಮಸ್ಯೆಯನ್ನು ಕಂಡು ಹಿಡಿಯಲು ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನ್ ನಡೆಸಿದಾಗ ಬಲ ಭಾಗದ ಕಿಡ್ನಿ ನೀರಿನಿಂದಾಗಿ ತುಂಬಾ ಊದಿಕೊಂಡಿರುವುದು ಹಾಗೂ ಆ ಕಿಡ್ನಿಯಲ್ಲಿ ಕಲ್ಲುಗಳ ರಾಶಿಯೇ ಪತ್ತೆಯಾಗಿದೆ! ಬಳಿಕ ವೈದ್ಯರು 2 ಗಂಟೆವರೆಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮಹಿಳೆಯ ಮೂತ್ರಪಿಂಡದಲ್ಲಿದ್ದ 300 ಕಲ್ಲುಗಳನ್ನು ಹೊರತೆಗೆದು ಪ್ರಾಣ ಉಳಿಸಿದ್ದಾರೆ.