Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅತಿ ಹೆಚ್ಚು ಎದೆ ಹಾಲು ದಾನ ಮಾಡಿ ವಿಶ್ವ ದಾಖಲೆ ನಿರ್ಮಿಸಿದ ಮಹಿಳೆ: ವಿಡಿಯೋ ವೈರಲ್

ವಾಷಿಂಗ್ಟನ್: ‘ಎದೆಹಾಲು ಓವರ್‌ಫ್ಲೋ’ ಸಿಂಡ್ರೋಮ್ ಹೊಂದಿರುವ ಅಮೆರಿಕದ ಮಹಿಳೆಯೊಬ್ಬರು ಅತಿ ಹೆಚ್ಚು ಎದೆಹಾಲು ದಾನ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಅಮೆರಿಕದ ಎಲಿಸಬೆತ್ ಆಂಡರ್ಸನ್-ಸಿಯೆರಾ ಅವರು 1,599.68 ಲೀಟರ್ ಎದೆಹಾಲನ್ನು ನೀಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 2015 ಮತ್ತು 2018 ರ ನಡುವೆ ಹಾಲಿನ ಬ್ಯಾಂಕ್‌ಗೆ 1,599.68 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ನನ್ನ ದೇಹವು ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನ್ ಅನ್ನು ಬಹಳಷ್ಟು ಸೃಷ್ಟಿಸುತ್ತದೆ. ಹೀಗಾಗಿ ಎದೆ ಹಾಲು ದಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಎದೆ ಹಾಲು ಉತ್ಪಾದನೆಯಾಗುತ್ತದೆ. ಹೀಗಾಗಿ, ನಾನು ಅತಿ ಹೆಚ್ಚು ಎದೆಹಾಲನ್ನು ದಾನ ಮಾಡಿ‌ ವಿಶ್ವ ದಾಖಲೆ ನಿರ್ಮಿಸುವುದು ಸಾಧ್ಯವಾಗಿದೆ ಎಂದು ಎಲಿಸಬೆತ್ ಹೇಳಿದ್ದಾರೆ.

https://suddimane.com/%e0%b2%a4%e0%b3%81%e0%b2%b3%e0%b3%81%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%82%e0%b2%a6%e0%b3%81-%e0%b2%86%e0%b2%9f%e0%b2%bf-%e0%b2%85%e0%b2%ae%e0%b2%be/

ಆಕೆಗೆ ಹೈಪರ್‌ಲ್ಯಾಕ್ಟೇಶನ್ ಸಿಂಡ್ರೋಮ್ ಇದೆ‌. ಈ ಸ್ಥಿತಿಯು ಹೆಚ್ಚಿನ ಎದೆಹಾಲು ಉತ್ಪಾದನೆ ಸಾಧ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಸ್ಥಳೀಯ ಕುಟುಂಬಗಳಿಗೆ ಮತ್ತು ವಿಶ್ವಾದ್ಯಂತ ಎದೆ ಹಾಲು ದಾನ ಮಾಡಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ‌ ಮಾಹಿತಿ ನೀಡಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ವೀಡಿಯೊವನ್ನು Instagram ನಲ್ಲಿ ಶುಕ್ರವಾರ ಪೋಸ್ಟ್ ಮಾಡಿದೆ ಮತ್ತು ಇದು 1.6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.