Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್‌ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್

ಕಿಯೋ ಕಂಪೆನಿಯು ಭಾರತದಲ್ಲಿ ಕಿಯಾ ಸೋನೆಟ್‌ ಫೇಸ್‌ಲಿಫ್ಟ್ ಪರಿಚಯಿಸಲು ಸಜ್ಜಾಗಿದೆ. ಈಗಾಗಲೇ ಕಿಯಾ ಸೋನೆಟ್‌ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.  ಕಿಯಾ ಸೋನೆಟ್ ಫೇಸ್‌ಲಿಫ್ಟ್ 2024 ಬುಕಿಂಗ್ ಈಗಾಗಲೇ ಆರಂಭಗೊಂಡಿದೆ. ಹಾಗಾದ್ರೆ ಈ ಕಾರಿನ ವಿಶೇಷತೆಗಳೇನು ? ಬೆಲೆ ಎಷ್ಟು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿಯಾ ಸೋನೆಟ್‌ ಫೇಸ್‌ಲಿಫ್ಟ್‌ ಹೊಸ ವಿನ್ಯಾಸದಲ್ಲಿ ಗ್ರಾಹಕರ ಕೈ ಸೇರಲಿದೆ. ಈಗಾಗಲೇ ಕಾರು ಬಿಡುಗಡೆಗೊಂಡಿದ್ದು, ಜನವರಿ ತಿಂಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಸೋನೆಟ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾಗಿದೆ. ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹುಂಡೈ ವೆನ್ಯೂ ಮತ್ತು ಮಹೀಂದ್ರಾ XUV300 ಕಾರುಗಳಿಗೆ ಫೇಸ್‌ಲಿಫ್ಟ್‌ ತೀವ್ರ ಪೈಪೋಟಿಯನ್ನು ಒಡ್ಡಲಿದೆ.

ಕಿಯಾ ಸೋನೆಟ್ ಫೇಸ್‌ಲಿಫ್ಟ್ 2024 ಕಾರು ಜನವರಿ ತಿಂಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಆದರೆ ಡೀಸೆಲ್ MT ರೂಪಾಂತರ ಬುಕ್ಕಿಂಗ ಮಾಡಿದವರಿಗೆ ಫೆಬ್ರವರಿ ತಿಂಗಳಲ್ಲಿ ಕಾರು ಸಿಗಲಿದೆ. ಕಿಯಾ ಸೋನೆಟ್ ಫೇಸ್‌ಲಿಫ್ಟ್ 2024 ಒಟ್ಟು ರೂಪಾಂತರಗಳು HTE, HTK, HTK+, HTX, HTX+, GTX+ ಮತ್ತು X-ಲೈನ್ ಸೇರಿದಂತೆ ಒಟ್ಟು 19 ರೂಪಾಂತರಗಳಲ್ಲಿ ಲಭ್ಯವಿದೆ.

ಕಿಯಾ ಸೋನೆಟ್‌ ಇಂಜಿನ್‌ನಲ್ಲಿಯೂ ಸ್ವಲ್ಪ ಪ್ರಮಾಣದ ಬದಲಾವಣೆಯನ್ನು ಮಾಡಲಾಗಿದೆ. ಅದ್ರಲ್ಲೂ ಇಂಜಿನ್‌ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಸೋನೆಟ್‌ ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. Smartstream G1.2-ಲೀಟರ್ ಪೆಟ್ರೋಲ್ (83PS/115Nm), Smartstream G1.0-ಲೀಟರ್ T-Gdi ಪೆಟ್ರೋಲ್ (120PS/172Nm) ಮತ್ತು 1.5-ಲೀಟರ್ CRDi VGT ಡೀಸೆಲ್ (116PS/250Nm). ಪ್ರಸರಣ ಆಯ್ಕೆ ಒಳಗೊಂಡಿದೆ.

ಅಷ್ಟೇ ಅಲ್ಲದೇ 1.2 ಪೆಟ್ರೋಲ್‌ನೊಂದಿಗೆ 5-ಸ್ಪೀಡ್ MT, 1.0 ಟರ್ಬೊ ಪೆಟ್ರೋಲ್‌ನೊಂದಿಗೆ 6-ಸ್ಪೀಡ್ iMT ಮತ್ತು 7-ಸ್ಪೀಡ್ DCT, ಮತ್ತು 1.5 ಡೀಸೆಲ್‌ನೊಂದಿಗೆ 6-ಸ್ಪೀಡ್ MT, 6-ಸ್ಪೀಡ್ iMT ಮತ್ತು 6-ಸ್ಪೀಡ್ AT ಸೇರಿವೆ. 6-ಸ್ಪೀಡ್ MT ಅನ್ನು 1.5 ಡೀಸೆಲ್‌ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ.

ಕಿಯಾ ಸೋನೆಟ್‌ 2024 ಪ್ರಯಾಣಿಕರ ರಕ್ಷಣೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಕಾರಿನಲ್ಲಿ ಒಟ್ಟು ಆರು ಏರ್‌ಬ್ಯಾಗ್‌ಗಳಿದ್ದು, ಎಲ್‌ಇಡಿ ಸೌಂಡ್-ಆಂಬಿಯೆಂಟ್ ಲೈಟಿಂಗ್, 10.25-ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್ ನ್ಯಾವಿಗೇಷನ್ ಮತ್ತು 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪ್ಯಾನೆಲ್ ಒಳಗೊಂಡಿದೆ. ಅಲ್ಲದೇ ಸರೌಂಡ್‌ ವ್ಯೂ ಮಾನಿಟರ್‌ ವೈಶಿಷ್ಟ್ಯತೆಗಳನ್ನು ಹೊಂದಿದೆ. 15 ಹೈ-ಸೇಫ್ಟಿ ಪ್ಯಾಕೇಜ್ ಮತ್ತು 10 ADAS ವೈಶಿಷ್ಟ್ಯತೆಯ ಜೊತೆಗೆ 25 ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.