Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಮೆಣಸಿನ ಕಾಯಿ ಹಾಕಿ ಚಿತ್ರಹಿಂಸೆ – 6 ಮಂದಿ ಆರೆಸ್ಟ್‌

ಲಕ್ನೋ: ಇಬ್ಬರು ಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಸೆರೆಹಿಡಿದು ಚಿತ್ರಹಿಂಸೆ ನೀಡಿದ  ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ.

10-15 ವರ್ಷದ ಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ರು ಎಂದು ಸ್ಥಳೀಯ ಗೂಂಡಾಗಳು ಬಾಲಕರನ್ನು ಸೆರೆ ಹಿಡಿದಿದ್ದಾರೆ.ಬಳಿಕ ಗೂಂಡಾಗಳು ಹುಡುಗರನ್ನು ಕಟ್ಟಿ ಹಾಕಿ ಹಸಿ ಮೆಣಸಿನ ಕಾಯಿಯನ್ನು ಕಚ್ಚಿ ತಿನ್ನುವಂತೆ ಬಲವಂತ ಮಾಡಿದ್ದಾರೆ. ಕಚ್ಚಿ ತಿಂದ ಬಳಿಕ ಅದನ್ನು ಮೂತ್ರದೊಂದಿಗೆ ಸೇವಿಸಿಬೇಕೆಂದು ಹಿಂಸೆ ಮಾಡಿದ್ದಾರೆ.

ಬಲವಂತವಾಗಿ ಇಬ್ಬರು ಬಾಲಕರಿಗೆ ಬಾಟಲಿಯಲ್ಲಿ ಮೂತ್ರ ಕುಡಿಸಿದ್ದಾರೆ. ಇದಾದ ಬಳಿಕ ಅವರನ್ನು ಕಟ್ಟಿ ಹಾಕಿ ಬಾಲಕರ ಅಂಗಿಯನ್ನು ಜಾರಿಸಿ ಗುದದ್ವಾರಕ್ಕೆ ಮೆಣಸಿನ ಕಾಯಿಯನ್ನು ಉಜ್ಜಿದ್ದಾರೆ. ಬಾಲಕರು ಉರಿ ಹಾಗೂ ನೋವು ತಾಳಲಾರದೆ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಯಾವುದೋ ಒಂದು ಔಷಧವನ್ನು ಚುಚ್ಚು ಮದ್ದಿನ ರೀತಿ ಬಾಲಕರಿಗೆ ಚುಚ್ಚಿದ್ದಾರೆ.ಎನ್ನಲಾಗಿದೆ.

ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಿದ್ಧಾರ್ಥನಗರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದಾಖಲಾದ ದೂರಿನ ಆಧಾರದ ಮೇಲೆ ಸೂಕ್ತ ಕ್ರಮಕೈಗೊಂಡಿದ್ದಾರೆ.ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.