Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಮಾನತು ಸರ್ವಾಧಿಕಾರಕ್ಕೂ ಮೀರಿದ್ದು; ಸಿಎಂ ಟ್ವಿಟ್.!

 

ಬೆಂಗಳೂರು: ಇಷ್ಟು ಜನ ಸಂಸದರ ಅಮಾನತು ಮಾಡಿರುವುದು ಸರ್ವಾಧಿಕಾರಿಗಿಂತಲೂ ಮೀರಿದ್ದಾಗಿದೆ ಎಂದು CM ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಟ್ವಿಟ್ ಮಾಡಿ, 141 ಸದಸ್ಯರನ್ನು ಒಂದೇ ಬಾರಿಗೆ ಅಮಾನತು ಮಾಡಿರುವುದು ಸಂಸತ್ತಿನ ಇತಿಹಾಸದ ಉದಾಹರಣೆಯಲ್ಲೇ ಇಲ್ಲ, ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಲು ಸಾಧ್ಯವಿಲ್ಲ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚರ್ಚೆ ಮಾಡುವುದು ಪ್ರಜಾಪ್ರಭುತ್ವದ ಮೂಲ, ಒಳ್ಳೆಯ ಸರ್ಕಾರ ಬಲಿಷ್ಠ ವಿರೋಧ ಪಕ್ಷ ಇದ್ದಾಗ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ ಎಂದಿದ್ದಾರೆ.