ಅಮೆರಿಕದ ಶಾಲೆಯೊಂದರಲ್ಲಿ ಗುಂಡಿನ ದಾಳಿ: ವಿದ್ಯಾರ್ಥಿ ಸಾವು, ಐವರು ಗಾಯ – ಆರೋಪಿ ಆತ್ಮಹತ್ಯೆ ಶರಣು
ವಾಷಿಂಗ್ಟನ್: ಅಮೆರಿಕದ ಅಯೋವಾ ನಗರದ ಶಾಲೆಯಲ್ಲಿ ಗುರುವಾರ ಬೆಳಗ್ಗೆ 17 ವರ್ಷದ ಯುವಕನೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ 6ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಕೃತ್ಯದ ಬಳಿಕ ಆರೋಪಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಾರಿ ಅಧಿಕಾರಿಗಳು, ಚಳಿಗಾಲದ ರಜೆ ಮುಗಿದು ತರಗತಿಗಳು ಆರಂಭವಾದ ಮೊದಲ ದಿನವೇ ದುರ್ಘಟನೆ ನಡೆದಿದೆ. ಆರೋಪಿಯನ್ನು ಪೆರ್ರಿ ಹೈಸ್ಕೂಲ್ನ ವಿದ್ಯಾರ್ಥಿ ಡೈಲನ್ ಬಟ್ಲರ್ ಎಂದು ಗುರುತಿಸಲಾಗಿದೆ. ಕೃತ್ಯದ ನಂತರ ಸ್ವಯಂ ಪ್ರೇರಿತ ಗುಂಡೇಟಿನಿಂದ ಆತ ಮೃತಪಟ್ಟಿರುವುದು ಕಂಡುಬಂದಿದೆ ಎಂದರು.