ಅಮೇರಿಕಾದಲ್ಲಿ ಮೂವರು ಫೆಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ
ವಾಷಿಂಗ್ಟನ್: ಮೂವರು ಫೆಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅಮೇರಿಕಾದ ವೆರ್ಮಾಂಟ್ ರಾಜ್ಯದ ಬರ್ಲಿಂಗ್ಟನ್ ನಲ್ಲಿ ನಡೆದಿದೆ.
ಗಾಯಗೊಂಡವರನ್ನು ಬ್ರೌನ್ ವಿವಿಯ ವಿದ್ಯಾರ್ಥಿ ಹಾಷಿಮ್ ಅವರ್ತಾನಿ, ಹೇವ್ಫೋರ್ಡ್ ವಿವಿಯ ವಿದ್ಯಾರ್ಥಿ ಕಿನ್ನಾನ್ ಅಬ್ದುಲ್ ಹಮೀದ್, ಟ್ರಿನಿಟಿ ಕಾಲೇಜಿನ ವಿದ್ಯಾರ್ಥಿ ತಷೀನ್ ಅಹ್ಮದ್ ಎಂದು ಗುರುತಿಸಲಾಗಿದೆ.
ಶನಿವಾರ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ, ರಸ್ತೆಯಲ್ಲಿ ಎದುರಾದ ವ್ಯಕ್ತಿಯೊಬ್ಬ ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಪ್ರಕರಣದ ಶಂಕಿತ ಆರೋಪಿ ಜೇಸನ್ ಜೆ. ಏಟನ್ ನನ್ನು ಬಂಧಿಸಲಾಗಿದೆ.