ಅಯೋಧ್ಯೆಯಲ್ಲಿ ತೀವ್ರ ಚಳಿ – ಶ್ರೀ ರಾಮ ಪ್ರಾಣಪ್ರತಿಷ್ಠೆಗೆ ಅಡ್ವಾಣಿ ಗೈರು
ನವದೆಹಲಿ : ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಅಡ್ವಾಣಿ ಅವರು ಗೈರಾಗಲಿದ್ದಾರೆ. ತೀವ್ರ ಚಳಿಯಿಂದಾಗಿ ಕೊನೆಯ ಕ್ಷಣದಲ್ಲಿ ಅಡ್ವಾಣಿಯವರ ಅಯೋಧ್ಯೆ ಪ್ರಯಾಣ ರದ್ದಾಗಿದೆ. ಈ ಮೂಲಕ ಅಡ್ವಾಣಿಯವರು ಇಂದಿನ ಕಾರ್ಯಕ್ರದಿಂದ ಹೊರಗುಳಿಯಲಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಚಳವಳಿಯಲ್ಲಿ ಅಡ್ವಾಣಿ ಕೂಡ ಪ್ರಮುಖ ವ್ಯಕ್ತಿ. 96 ನೇ ವಯಸ್ಸಿನಲ್ಲಿಯೂ ಆಹ್ವಾನ ಸ್ವೀಕರಿಸಿ ಅಯೋಧ್ಯೆಗೆ ತೆರಳಲು ಸಿದ್ಧರಾಗಿದ್ದರು.
ಭಾರತೀಯ ಹವಾಮಾನ ಇಲಾಖೆ ಬುಲೆಟಿನ್ ಪ್ರಕಾರ, ಅಯೋಧ್ಯೆಯಲ್ಲಿ ಲಘು ಗಾಳಿಯೊಂದಿಗೆ ಚಳಿಯ ಅಲೆ ಮುಂದುವರಿಯುತ್ತದೆ. ಬೆಳಗಿನ ಗೋಚರತೆ ಕೂಡ 100 ರಿಂದ 400 ಮೀಟರ್ ಆಗಿರುತ್ತದೆ. ದಿನ ಕಳೆದಂತೆ ಗೋಚರತೆ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ.