Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೊ

ಬೆಂಗಳೂರು: ಬಾಹ್ಯಾಕಾಶದಲ್ಲಿ ಉಪಗ್ರಹದಿಂದ ಸೆರೆ ಹಿಡಿಯಲಾಗಿರುವ ಅಯೋಧ್ಯೆ ರಾಮ ಮಂದಿರದ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆಗೊಳಿಸಿದೆ.

ಹೈದರಾಬಾದ್‍ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಕೇಂದ್ರವು ಈ ಚಿತ್ರವನ್ನು ಹಂಚಿಕೊಂಡಿದ್ದು, ಡಿಸೆಂಬರ್ 16ರಂದು ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರವನ್ನು ತೆಗೆಯಲಾಗಿತ್ತು ಎನ್ನಲಾಗಿದೆ.

ಜನವರಿ 22ರ ನಾಳೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ.