ಅರವಿಂದ ಕೇಜ್ರಿವಾಲ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಇಡಿ
ನವದೆಹಲಿ: ಮದ್ಯ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ನೀಡಿದ ಸಮನ್ಸ್‌ಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಇಡಿ ರೌಸ್ ಅವೆನ್ಯೂ ಕೋರ್ಟ್ ನಲ್ಲಿ ದೂರು ದಾಖಲಿಸಿದೆ.
ನ್ಯಾಯಾಲಯವು ಶನಿವಾರ ಈಡಿ ದೂರುಗಳನ್ನು ಆಲಿಸಿ, ಮುಂದಿನ ವಿಚಾರಣೆಯನ್ನು ಫೆಬ್ರವರಿ 7 ಕ್ಕೆ ಮುಂದೂಡಿದೆ.
ಅರವಿಂದ್ ಕೇಜ್ರಿವಾಲ್ ಅವರು ಜನವರಿ 19 ರಂದು ವಿಚಾರಣೆಗೆ ಹಾಜರಾಗಿರುವುದಿಲ್ಲ. ಇಡಿ ನೀಡಿದ ಸಮನ್ಸ್ ಕಾನೂನುಬಾಹಿರವಾಗಿದ್ದು, ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸುವುದು ಅವರ ಏಕೈಕ ಗುರಿ ಆಗಿದೆ ಎಂದು ಎಎಪಿ ಆರೋಪಿಸಿದೆ. ಎಎಪಿ ಮುಖ್ಯಸ್ಥರಾದ ಕೇಜ್ರಿವಾಲ್ ನವೆಂಬರ್ 2, ಡಿಸೆಂಬರ್ 21, ಜನವರಿ 3 ರಂದು ನೀಡಿರುವ ಸಮನ್ಸ್ ಗಳಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು.
ಕೇಜ್ರಿವಾಲ್ ಅವರಿಗೆ ನೀಡಿರುವ ಸಮನ್ಸ್ ರಾಜಕೀಯ ಪ್ರೇರಿತ ಹಾಗೂ ಕಾನೂನುಬಾಹಿರವಾಗಿದೆ. ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ದೆಹಲಿ ಸರ್ಕಾರವನ್ನು ಬೀಳಿಸುವುದು ಪ್ರಧಾನಿ ಮೋದಿ ಅವರ ಗುರಿ. ಇದನ್ನು ನಾವು ಸಾಧಿಸಲು ಬಿಡುವುದಿಲ್ಲ ಎಂದು ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ಎಎಪಿ ಆಕ್ರೋಶ ವ್ಯಕ್ತಪಡಿಸಿತ್ತು.