ಆಂಧ್ರದ ಆರ್ಥಿಕ ಸ್ಥಿತಿ ಅಸ್ತವ್ಯಸ್ತ: ಪವನ್ ಕಲ್ಯಾಣ ಆರೋಪ.!
ಆಂಧ್ರ ಪ್ರದೇಶ: ಆರ್ಥಿಕ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ ಎಂದು ಜನಸೇನಾ ಸಂಸ್ಥಾಪಕ, ನಟ ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಜನರಿಗೆ ಆದಾಯದ ಮೂಲವೇ ಕಾಣದಾಗಿದೆ. ಹೊರಗಿನಿಂದ ಸಾಲ ಪಡೆದು ಸರ್ಕಾರ ನಡೆಸಲಾಗುತ್ತಿದೆ.
ಸರ್ಕಾರಿ ನೌಕರರ ವೇತನ 10ರಿಂದ 15 ದಿನಗಳ ಕಾಲ ತಡವಾಗಿ ಆಗುತ್ತಿದೆ. ಕೇಂದ್ರ ಸಂಚಿತ ನಿಧಿಯಿಂದ ಬರುವ ಹಣವನ್ನೂ ಕೂಡ ಇತರೆ ಕೆಲಸಗಳಿಗೆ ವಿನಿಯೋಗಿಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.