ಆಟವಾಡುತ್ತಿದ್ದ ವೇಳೆ ಸಿಡಿಲು ಬಡಿದು ಪ್ರಾಣ ಕಳೆದುಕೊಂಡ ಫುಟ್ಬಾಲ್ ಆಟಗಾರ
ಇಂಡೋನೇಷ್ಯ: ಒಬ್ಬನ ಬದುಕು ಯಾವಗ ಅಂತ್ಯವಾಗುತ್ತದೆ, ಎಷ್ಟು ಸಮಯ ಇರುತ್ತೆ ಎಂದು ಯಾರಿಂದಲೂ ಊಹಿಸಲು ಅಸಾಧ್ಯ, ಅದೇ ರೀತಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿ ವೇಳೆ ಆಟಗಾರನೊಬ್ಬನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿದೆ.
ಇದು ಇಂಡೋನೇಷ್ಯಾದಲ್ಲಿ ನಡೆದ ಆಘಾತಕಾರಿ ಘಟನೆಯಾಗಿದೆ. ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಶ್ಚಿಮ ಜಾವಾದ ಬಂಡಂಗ್ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಸುಬಾಂಗ್ ಮತ್ತು ಬಂಡಂಗ್ ತಂಡದ ನಡುವೆ ನಡೆದ ಸೌಹಾರ್ದಯುತವಾದ ಪಂದ್ಯದಲ್ಲಿ ಸುಬಾಂಗ್ ತಂಡದಲ್ಲಿ ಭಾಗವಹಿಸಿದ್ದ ಸೆಪ್ಟೈ ನ್ ರಹರ್ಜಾ ಎಂಬ ವ್ಯಕ್ತಿಕ್ರೀಡಾಂಗಣದಲ್ಲಿ ಆಟವಾಡುವ ವೇಳೆ ಸಿಡಿಲು ಬಡಿದಿದೆ ಕೂಡಲೇ ಅಲ್ಲಿದ್ದ ಇತರ ಆಟಗಾರರು ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು.