‘ಆತ್ಮಾವಲೋಕನ ಮಾಡಿಕೊಳ್ಳಿ’: ವಿರೋಧ ಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ
ನವದೆಹಲಿ:ತಮ್ಮ ಅಶಿಸ್ತಿನ ವರ್ತನೆಗಾಗಿ ಕಳೆದ ಅಧಿವೇಶನದಲ್ಲಿ ಅಮಾನತುಗೊಂಡಿರುವ ಪ್ರತಿಪಕ್ಷಗಳ ಸಂಸದರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ” ವಿರೋಧ ಪಕ್ಷದ ಸಂಸದರಿಗೆ ಬುಧವಾರ ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ “ವಿರೋಧ ಪಕ್ಷದ ಶಾಸಕರ ಅಶಿಸ್ತಿನ ವರ್ತನೆ ಯಾರು ನೆನಪಿಟ್ಟುಕೊಳ್ಳುವುದಿಲ್ಲ. ಸಂಸತ್ಗೆ ಧನಾತ್ಮಕವಾಗಿ ಕೊಡುಗೆ ನೀಡಿದವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಆದರೆ, ಸಂಸತ್ನಲ್ಲಿ ದಾಂಧಲೆ ನಡೆಸಿದವರನ್ನು ನೆನಪು ಮಾಡಿಕೊಳ್ಳೋದು ಕಡಿಮೆ. ಹೀಗಾಗಿ, ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸಂಸದರು ಧನಾತ್ಮಕ ಹೆಜ್ಜೆ ಇಡಲು ಒಂದು ಅವಕಾಶ ಎಂದು ಹೇಳಿರುವ ಪ್ರಧಾನಿ ಮೋದಿ, ಸಂಸದರು ಅತ್ಯುತ್ತಮವಾಗಿ ಹಾಗೂ ಧನಾತ್ಮಕವಾಗಿ ಪ್ರದರ್ಶನ ನೀಡಲು ಸಿಕ್ಕಿರುವ ಅವಕಾಶವನ್ನು ಕೈ ಚೆಲ್ಲಬಾರದು” ಎಂದು ಕರೆ ನೀಡಿದ್ದಾರೆ.
ಈ ಬಜೆಟ್ ಅಧಿವೇಶನವು ಪಶ್ಚಾತ್ತಾಪಕ್ಕೆ ಮತ್ತು ಸಕಾರಾತ್ಮಕ ಹೆಜ್ಜೆಗುರುತುಗಳನ್ನು ಉಳಿಸಲು ಇರುವ ಒಂದು ಅವಕಾಶವಾಗಿದೆ. ಸಂಸದೀಯ ಮೌಲ್ಯಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಭಗ್ನಗೊಳಿಸುವ ಹವ್ಯಾಸ ಇರುವ ಸಂಸದರು ಇದೀಗ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ತಮ್ಮ ಸಂಸತ್ ಸದಸ್ಯ ಅವಧಿಯಲ್ಲಿ ತಾವು ಏನೆಲ್ಲಾ ಮಾಡಿದ್ದೇವೆ ಎಂದು ಸಿಂಹಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮೂಲಕ ಕಳೆದ ಚಳಿಗಾಲದ ಅಧಿವೇಶನದ ವೇಳೆ ಅಮಾನತು ಶಿಕ್ಷೆಗೆ ಗುರಿಯಾದ 146 ವಿಪಕ್ಷ ಸಂಸದರಿಗೆ ಚಾಟಿ ಬೀಸಿದ್ದಾರೆ.