Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆಪರೇಷನ್ ಅಜಯ್’: ಇಸ್ರೇಲ್‌ನಿಂದ ಭಾರತಕ್ಕೆ ಬಂದಿಳಿದ 143 ಮಂದಿ ಪ್ರಯಾಣಿಕರು

ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ‘ಆಪರೇಷನ್ ಅಜಯ್’ ಕಾರ್ಯಾಚರಣೆಯ ಅಡಿಯಲ್ಲಿ ಇಸ್ರೇಲ್‌ನಿಂದ ಹೊರಟ ಆರನೇ ವಿಮಾನದಲ್ಲಿ ಇಬ್ಬರು ನೇಪಾಳ ಪ್ರಜೆಗಳು ಸೇರಿದಂತೆ 143 ಮಂದಿ ಭಾರತೀಯರು ತಾಯ್ನಾಡಿಗೆ ಬಂದಿಳಿದಿದ್ದಾರೆ.

ಇಬ್ಬರು ನೇಪಾಳ ಪ್ರಜೆಗಳು ಮತ್ತು ನಾಲ್ವರು ಮಕ್ಕಳು ಸೇರಿದಂತೆ 143 ಜನರು ವಿಮಾನದಲ್ಲಿದ್ದು, ದೆಹಲಿಗೆ ಬಂದಿಳಿದ ಪ್ರಯಾಣಿಕರನ್ನು ಕೇಂದ್ರ ಸಚಿವ ಫಗ್ಗನ್ ಕುಲಸ್ತೆ ಅವರು ಬರಮಾಡಿಕೊಂಡಿದ್ದಾರೆ.

ಅಕ್ಟೋಬರ್ 7 ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲಿನ ನಗರಗಳ ಮೇಲೆ ದಾಳಿ ಮಾಡಿದ್ದು, ಇದಕ್ಕೆ ಇಸ್ರೇಲ್ ಪ್ರತಿದಾಳಿ ನಡೆಸಿತ್ತು. ಇದು ಯುದ್ದದ ಸ್ವರೂಪ ಪಡೆಯುತ್ತಿದ್ದಂತೆಯೇ , ಭಾರತ ಸರ್ಕಾರವು ತನ್ನ ನಾಗರಿಕರ ವಾಪಸಾತಿಗಾಗಿ ಅಕ್ಟೋಬರ್ 12 ರಂದು ‘ಆಪರೇಷನ್ ಅಜಯ್’ ಅನ್ನು ಪ್ರಾರಂಭಿಸಿತ್ತು.