Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆರ್‌ಆರ್‌ಟಿಎಸ್ ಸೇವೆಗೆ ‘ನಮೋ ಭಾರತ್’ ಹೆಸರು ಯಾಕೆ? ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ರ್‍ಯಾಪಿಡ್ ಎಕ್ಸ್ ರೈಲಿಗೆ ಕೇಂದ್ರ ಸರಕಾರ ‘ನಮೋ ಭಾರತ್’ ಎಂದು ಹೆಸರಿಟ್ಟಿದೆ. ಈ ಹೆಸರಿನ ಬಗ್ಗೆ ಕಾಂಗ್ರೆಸ್ ಪಕ್ಷ ಅಪಸ್ವರ ಎತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಯಂ ವ್ಯಾಮೋಹಕ್ಕೆ ಮಿತಿಯೇ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇಂದು ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ರ್‍ಯಾಪಿಡ್ ಎಕ್ಸ್ ರೈಲುಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕೂ ಕಾಂಗ್ರೆಸ್ ಪಕ್ಷ ‘ನಮೋ ಭಾರತ್’ ಎಂಬ ಹೆಸರಿಗೆ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದು, “ನಮೋ ಕ್ರೀಡಾಂಗಣದ ನಂತರ ಈಗ ನಮೋ ತರಬೇತಿ ಪಡೆಯುತ್ತಿದೆ. ಅವರ ಸ್ವಯಂ ಗೀಳಿಗೆ ಯಾವುದೇ ಮಿತಿಯಿಲ್ಲ.” ಅಹಮದಾಬಾದ್‌ನ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಹೆಸರಿಡಲಾಗಿದೆ ಎಂದು ಕಿಡಿಕಾರಿದ್ದಾರೆ.