ಆಸ್ಟ್ರೇಲಿಯಾದ ಬೀಚ್ನಲ್ಲಿ ಮುಳುಗಿ ನಾಲ್ವರು ಭಾರತೀಯರು ಮೃತ್ಯು
ಮೆಲ್ಬೋರ್ನ್ :ಆಸ್ಟ್ರೇಲಿಯಾದ ವಿಕ್ಟೋರಿಯಾದ ಫಿಲಿಪ್ ಐಲ್ಯಾಂಡ್ ಬೀಚ್ನಲ್ಲಿ ನಾಲ್ವರು ಭಾರತೀಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಜ.24ರಂದು ನಡೆದಿದೆ.
ಈ ಘಟನೆಯಲ್ಲಿ ಒಬ್ಬ ಯುವಕ ಹಾಗೂ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಕ್ಯಾನ್ಬೆರಾದಲ್ಲಿರುವ ಭಾರತೀಯ ಹೈಕಮಿಷನ್, ಮೃತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ ಎಂದು ಮೆಲ್ಬೋರ್ನ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ತಂಡ ತಿಳಿಸಿದ್ದಾರೆ.