Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂಡೋ-ಪಾಕ್ ಪಂದ್ಯದಲ್ಲಿ ಚಿನ್ನದ ಐಫೋನ್ ಕಳೆದುಕೊಂಡ ನಟಿ

ಅಹಮದಾಬಾದ್: ಇತ್ತೀಚೆಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ನಟಿ ಊರ್ವಶಿ ರೌಟೇಲಾ ಚಿನ್ನದ ಐಫೋನ್ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಶನಿವಾರ ರಾತ್ರಿ ಊರ್ವಶಿ ರೌಟೇಲಾ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಆನಂದಿಸಲು ನರೇಂದ್ರ ಮೋದಿ ಸ್ಟೇಡಿಯಂ ತಲುಪಿದ್ದರು. ಆಗ ಸ್ಟೇಡಿಯಮ್‌ನಲ್ಲಿ ನಟಿಯ 24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಹೋಗಿದೆ. ಈ ಬಗ್ಗೆ ಊರ್ವಶಿ ಮಾಹಿತಿಯನ್ನು ನೀಡಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಅವರು ಅಹಮದಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿ, ನನ್ನ 24 ಕ್ಯಾರೆಟ್ ಐಫೋನ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದುಹೋಗಿದೆ. ಯಾರಿಗಾದರು ಸಿಕ್ಕರೆ ದಯವಿಟ್ಟು ತಕ್ಷಣ ಸಂಪರ್ಕಿಸಿ ಎಂದು ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಬರೆದುಕೊಂಡಿದ್ದಾರೆ.