ಇಂದಿನಿಂದ ಕಡ್ಲೇಬಾಳು : ಶ್ರೀ ನಾಗಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ
ದಾವಣಗೆರೆ,: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಕಡ್ಲೇಬಾಳು ಗ್ರಾಮದ ಶ್ರೀ ನಾಗಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ದೇವಸ್ಥಾನದ 6ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಮಾರ್ಚ್ 14 ಮತ್ತು 15ರಂದು ನಡೆಯಲಿದೆ.
14.03.2024ರ ಗುರುವಾರ ಪ್ರಾತಃಕಾಲ ಗುರು ಗಣಪತಿ ಪ್ರಾರ್ಥನೆ, ಗಣಪತಿ ಹೋಮ, ನಾಗರಾಜ ಮೂಲಮಂತ್ರ ಹೋಮ, ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ಸಂಜೆ ಮಂಗಳಾರತಿ ಜರುಗಲಿದೆ.
15.03.20245ರ ಶುಕ್ರವಾರ ಪ್ರಾತಃಕಾಲ ಶ್ರೀ ನಾಗಸುಬ್ರಹ್ಮೇಶ್ವರ ಸ್ವಾಮಿಗೆ ವಿಶೇಷ ಪಂಚಾಮೃತಾಭಿಷೇಕ, ಪವಮಾನ ಅಭಿಷೇಕ, ರುದ್ರಾಭಿಷೇಕ, ವಿಶೇಷ ಅಲಂಕಾರ, ಸಾಮೂಹಿಕ ಆಶ್ಲೇಷ ಬಲಿಪೂಜೆ, ಮಹಾಪೂರ್ಣಾಹುತಿ, ರಥೋತ್ಸವ, ಅನ್ನ ಸಂತರ್ಪಣೆ ಆಯೋಜನೆಗೊಂಡಿದೆ.
ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಬೆಂಗಳೂರು ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮೀಜಿ ವಹಿಸುವರು.