Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದಿನಿಂದ ರಾಹುಲ್ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಆರಂಭ

ಗುವಾಹಟಿ: ಇಂದಿನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಮಣಿಪುರದಿಂದ ಆರಂಭವಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಭಾರತ್ ಜೋಡೊ ನ್ಯಾಯ ಯಾತ್ರೆಯು, ಭಾರತ್ ಜೋಡೊ ಯಾತ್ರೆಯ ಎರಡನೇ ಹಂತ ಎಂದರು.

ಇನ್ನು ಭಾರತ್ ಜೋಡೊ ನ್ಯಾಯ ಯಾತ್ರೆಯ ಉದ್ಘಾಟನೆಯಲ್ಲಿ ಕಾಂಗ್ರೆಸ್ ಆಡಳಿತ ಇರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದು, ಇದೊಂದು ಸೈದ್ಧಾಂತಿಕ ಯಾತ್ರೆ. ಚುನಾವಣೆ ಯಾತ್ರೆ ಅಲ್ಲ. ಇದೊಂದು ರಾಜಕೀಯ ರ್‍ಯಾಲಿಯಾಗಿದ್ದು, ನಮ್ಮ ರಾಜಕೀಯ ಉದ್ದೇಶ ಸಂವಿಧಾನ, ಸಂವಿಧಾನದ ಪ್ರಸ್ತಾವನೆ, ಅದರ ತತ್ತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ರಕ್ಷಿಸುವುದು ಎಂದು ತಿಳಿಸಿದ್ದಾರೆ.