Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದಿನಿಂದ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭ

ನವದೆಹಲಿ: ಸೋಮವಾರದಿಂದ ಆರಂಭಗೊಂಡ ಸಂಸತ್‌ನ ವಿಶೇಷ ಅಧಿವೇಶನ 5 ದಿನಗಳ ಕಾಲ ನಡೆಯಲಿದ್ದು, ಮೊದಲ ದಿನವಾದ ನಿನ್ನೆ ಹಳೇ ಸಂಸತ್​​​​ ಭವನದಲ್ಲಿ ಅಧಿವೇಶನ ಆರಂಭವಾಗಿದ್ದು, ಇಂದು ಹೊಸ ಸಂಸತ್ ಭವನಕ್ಕೆ ಕಲಾಪ ವರ್ಗಾವಣೆಯಾಗಿ ಅಧಿಕೃತ ಕಲಾಪ ಆರಂಭವಾಗಲಿದೆ.

ಇಂದು ಪ್ರಧಾನಿ ಮೋದಿ ಕಾಲ್ನಡಿಗೆಯಲ್ಲಿ ಸಂವಿಧಾನದ ಪ್ರತಿಯೊಂದಿಗೆ ಹೊಸ ಸಂಸತ್​​ಗೆ​ ಮೋದಿ ಆಗಮಿಸಲಿದ್ದಾರೆ.

ಇನ್ನು ಹೊಸ ಸಂಸತ್ ಭವನದಲ್ಲಿ ಇಂದು ಮಧ್ಯಾಹ್ನ ಕಲಾಪ ಆರಂಭವಾಗಲಿದ್ದು, ಲೋಕಸಭೆಯಲ್ಲಿ ಮಧ್ಯಾಹ್ನ 1.15ಕ್ಕೆ ವಿಶೇಷ ಅಧಿವೇಶನ ಕಲಾಪ ಆರಂಭಗೊಂಡು, ರಾಜ್ಯಸಭೆಯಲ್ಲಿ ಮಧ್ಯಾಹ್ನ 2:15ಕ್ಕೆ ಕಲಾಪ ಆರಂಭವಾಗಲಿದೆ.