ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನು ಸೇರ್ಪಡೆ.!
ಬೆಂಗಳೂರು: ಬೆಂಗಳೂರಿನ ಬಿಬಿಎಂಪಿ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಮೆನುಗೆ ಮತ್ತಷ್ಟು ಪದಾರ್ಥಗಳು ಸೇರ್ಪಡೆಯಾಗಲಿವೆ.
ಈಗಾಗಲೇ ಇರುವ ಆಹಾರದ ಮೆನುಗೆ ಮುದ್ದೆ, ಸಾರು, ಚಪಾತಿ, ಪಲ್ಯ ಸೇರ್ಪಡೆಯಾಗಿದ್ದು, ಸಂಕ್ರಾಂತಿ ಹಬ್ಬದ ನಂತರ ಅನುಷ್ಠಾನವಾಗಲಿದೆ. ಸಾರ್ವಜನಿಕರು ಒಂದು ದಿನ ಬಿಟ್ಟು ಮತ್ತೊಂದು ದಿನ ಎರಡೂ ಬಗೆಯ ಆಹಾರವನ್ನು ಸೇವಿಸಬಹುದಾಗಿದೆ. ಈ ಬಗ್ಗೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.!