ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಜೂನ್ ನಲ್ಲಿ ತೆರೆಗೆ
ನಟಿ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ಚಿತ್ರ ಇದೇ ಜೂನ್ 14ರಂದು ತೆರೆಗೆ ಬರಲಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಂಗನಾ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
‘ಜೀ ಸ್ಟುಡಿಯೋಸ್’ ಮತ್ತು ‘ಮಣಿಕರ್ಣಿಕ ಫಿಲ್ಮ್ಸ್’ ಈ ಚಿತ್ರವನ್ನು ಒಟ್ಟಾಗಿ ನಿರ್ಮಾಣ ಮಾಡುತ್ತಿದೆ.
‘ಎಮರ್ಜೆನ್ಸಿ ಸಿನಿಮಾ ಈ ವರ್ಷ ಜೂನ್ 14ರಂದು ರಿಲೀಸ್ ಆಗಲಿದೆ’ ಎಂದು ಕಂಗನಾ ಮಾಹಿತಿ ಹಂಚಿಕೊಂಡಿದ್ದಾರೆ.ಈ ಸಿನೆಮಾದಲ್ಲಿ ಕಂಗನಾರವರೇ ಸ್ವತಃ ಕಥೆ ಬರೆದು, ನಿರ್ದೇಶಕಿ ಆಗಿಯೂ ಪ್ರೇಕ್ಷಕರ ಎದುರು ಬರಲಿದ್ದಾರೆ.
ಕಂಗನಾ ರಣಾವತ್, ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಡೆ, ವಿಶಾಕ್ ನಾಯರ್, ಸತೀಶ್ ಕೌಶಿಕ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.