Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದು ಏಷ್ಯಾಕಪ್ ಕಿರೀಟಕ್ಕಾಗಿ ಭಾರತ ಲಂಕಾ ನಡುವೆ ಹೈವೋಲ್ಟೇಜ್ ಪಂದ್ಯ

ಏಷ್ಯಾಕಪ್ ಸರಣಿಯು ಇದೀಗ ಫೈನಲ್ ಪಂದ್ಯಕ್ಕೆ ಬಂದು ನಿಂತಿದೆ. ಪ್ರಶಸ್ತಿಗಾಗಿ ಇಂದು ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ.16 ನೇ ಆವೃತ್ತಿಯ ಈ ಟೂರ್ನಿ, ಈಗಾಗಲೇ ಭಾರತ 7 ಬಾರಿ ಪ್ರಶಸ್ತಿ ಬಾಚಿಕೊಂಡಿದೆ. ಶ್ರೀಲಂಕಾ 6 ಬಾರಿ ಗೆದ್ದು ಬೀಗಿದೆ. ಕಳೆದ 5 ವರ್ಷದ ಬಳಿಕ ಏಷ್ಯಾಕಪ್ ಕಿರೀಟಕ್ಕೆ ಭಾರತ ಎದುರು ನೋಡುತ್ತಿದೆ. ಅತ್ತ ಹಾಲಿ ಚಾಂಪಿಯನ್ ಆಗಿರುವ ಲಂಕಾ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಪಂದ್ಯ ಇಂದು ಮಧ್ಯಾಹ್ನ 3 ಕ್ಕೆ ಶುರುವಾಗಲಿದ್ದು ಫೈನಲ್ ಯಾರು ಗೆಲ್ಲುತ್ತಾರೂ ಕಾದು ನೋಡಬೇಕಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಏಷ್ಯಾಕಪ್ ಫೈನಲ್​ನಲ್ಲಿ ಮುಖಾಮುಖಿ ಆಗುತ್ತಿದೆ. ಎರಡು ಬಲಿಷ್ಠ ತಂಡದಗಳ ನಡುವಣ ಕಾದಾಟಕ್ಕೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ಟೀಮ್ ಇಂಡಿಯಾ ಎಂಟನೇ ಬಾರಿಗೆ ಏಷ್ಯಾಕಪ್ ಎತ್ತಿ ಹಿಡಿಯುವ ಪ್ಲಾನ್​ನಲ್ಲಿದ್ದರೆ, ಇತ್ತ ಸಿಂಹಳೀಯರು ಆರನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ. ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾನಕ, ದಿಮುತ್ ಕರುಣಾರತ್ನ, ಕುಸಲ್ ಜನಿತ್ ಪೆರೇರಾ, ಕುಸಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಮತೀಶ ಪತಿರಣ, ಬಿ ಕಸುನ್ ರಜಿತ, ಬಿ. ಫೆರ್ನಾಂಡೋ, ಪ್ರಮೋದ್ ಮದುಶನ್.