Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟ್ನಾ: ಬಿಹಾರದಲ್ಲಿ ರಾಜಕೀಯ ಬೆಳವಣಿಗಳು ರಾಜಕಾರಣದಲ್ಲಿ ಸಂಚಾಲವನ್ನು ಉಂಟು ಮಾಡಿದೆ. ಸಿಎಂ ನಿತೀಶ್ ಕುಮಾರ್
ಐಎನಡಿಐಎಯಿಂದ ಹೊರಗೆ ಬಂದು ಎನ್‌ಡಿಎ ಜತೆ ಕೈಜೋಡಿಸಿ ಬಿಹಾರದಲ್ಲಿ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಹಾರದಲ್ಲಿ ನಡೆಯುವ ರಾಜಕೀಯ ನಾಟಕಕ್ಕೆ ಇಂದು ತೆರೆಬೀಳುವ ಸಾಧ್ಯತೆಯಿದೆ. ಇಂದು ರಾಜ್ಯಪಾಲರನ್ನು ಭೇಟಿ ಮಾಡಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮಯ ಕೋರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇಂದು ಜ.28 ಬೆಳಗ್ಗೆ ಜೆಡಿಯು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಆರ್‌ಜೆಡಿ-ಕಾಂಗ್ರೆಸ್ ಮೈತ್ರಿ ಬಿಟ್ಟು ಎನ್‌ಡಿಎ ಸೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬಳಿಕ ಮುಖ್ಯಮಂತ್ರಿ ನಿತೀಶ್ ನಿವಾಸದಲ್ಲೇ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ. ಸಭೆಯಲ್ಲಿಸಮಾಲೋಚನೆ ಬಳಿಕ ನಿತೀಶ್ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ. ಜತೆಗೆ ಎನ್‌ಡಿಎ ಶಾಸಕರ ಬೆಂಬಲ ಕುರಿತ ಪತ್ರವನ್ನೂ ರಾಜ್ಯ ಪಾಲರಿಗೆ ಸಲ್ಲಿಸಲಿದ್ದಾರೆ. ಸಂಜೆ ಹೊಸ ಸಚಿವ ಸಂಪುಟದ ಪ್ರಮಾಣ ಸ್ವೀಕಾರ ನಡೆಯಲಿದೆ ಎಂದು ಜೆಡಿಯು ಮೂಲಗಳು ತಿಳಿಸಿವೆ.