Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದು ಸೆ.30 ರಂದು ಈ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ

 

ಚಿತ್ರದುರ್ಗ: ಚಿತ್ರದುರ್ಗ ಗ್ರಾಮೀಣ ಉಪವಿಭಾಗದ ಭರಮಸಾಗರ ಶಾಖಾ ವ್ಯಾಪ್ತಿಯಲ್ಲಿನ ಭರಮಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಂ.ವಿ.ಏ ಪರಿವರ್ತಕಗಳ ಅಳವಡಿಕೆ ಕಾರ್ಯ ನಡೆಯುವುದರಿಂದ ಸೆಪ್ಟೆಂಬರ್ 30ರಂದು ವಿದ್ಯುತ್ ಸರಬರಾಜಿನಲ್ಲಿ ವತ್ಯಯ ಉಂಟಾಗಲಿದೆ.

ಈ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಹೆಗ್ಗರೆ, ಎಮ್ಮಿಹಟ್ಟಿ,ನಲ್ಲಿಕಟ್ಟೆ, ಹೆಗಡೆಹಾಳ್, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದ್ದೂರ್ ಘಟ್ಟ, ಪಾಮರಹಳ್ಳಿ, ಕೋಡಿಹಳ್ಳಿ, ಹರಳಿಕಟ್ಟೆ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.

ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.