ಇನ್ನು ಖಾತೆಗೆ ಹಣ ಬಂದಿಲ್ಲವೇ..? ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಲವಾರು ಕಾರಣಗಳಿಂದ ಇನ್ನು ಕೆಲವರ ಖಾತೆಗೆ ಬಂದಿಲ್ಲ. ಒಂದು ವೇಳೆ ರೇಷನ್ ಕಾರ್ಡ್ ರದ್ದಾಗಿದ್ದರೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಾರದೆ
ಇರಬಹುದು ಎಂದು ಕೆಲವು ಕಡೆ ವರದಿಯಾಗಿದೆ.
ಹಾಗಾಗಿ ಸರ್ಕಾರದ ಮಾಹಿತಿ ಕಣಜ ಎನ್ನುವ ಅಧಿಕೃತ ವೆಬ್ ಸೈಟ್ ಗೆ ಹೋಗಿ ಮುಖಪುಟದಲ್ಲಿನ ಗೃಹ ಲಕ್ಷ್ಮೀ ಸ್ಟೇಟಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ, ಗೋ ಆಪ್ಪನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆಯ
ಬಗ್ಗೆ ಮಾಹಿತಿ ಸಿಗುತ್ತದೆ. ಡಿಬಿಟಿ ಆ್ಯಪ್ ಮೂಲಕವೂ ಪರೀಕ್ಷಿಸಬಹುದು.