ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಮತ್ತೊಬ್ಬರು ಬೆಂಬಲ.!
ಬೆಂಗಳೂರು: ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಸಲಹೆಯನ್ನು Naukri.com ಅಧ್ಯಕ್ಷ ಸಂಜೀವ್ ಬಿಬ್ಬಂದಾನಿ ಬೆಂಬಲಿಸಿದ್ದಾರೆ.
ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವುದು ವಾಸ್ತವಿಕವಲ್ಲ. ಆದರೆ ಯಾವುದೇ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಾಗಿರಬೇಕು.
ನೀವು ಗೆಲ್ಲಲು ಬಯಸಿದರೆ.. ಸಂಜೆ 5 ಗಂಟೆಯ ನಂತರ, ವಾರಾಂತ್ಯದಲ್ಲಿ ಕೆಲಸ ಮಾಡಲ್ಲ ಎಂದು ಹೇಳಬೇಡಿ. ಯಶಸ್ವಿ ಉದ್ಯಮಿಗಳನ್ನು ಕೇಳಿದರೆ, ನಿಮಗೆ ಅದೇ ವಿಷಯವನ್ನು ಹೇಳುತ್ತಾರೆ ಎಂದಿದ್ದಾರೆ.