Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇನ್‌ಸ್ಟಾಗ್ರಾಮ್‌‌ನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ಭಾರತಕ್ಕೆ ಬಂದ ಪೋಲೆಂಡ್ ಮಹಿಳೆ!

ರಾಂಚಿ:‌ ಇನ್‌ಸ್ಟಾಗ್ರಾಮ್‌‌ನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ಪೋಲೆಂಡ್ ದೇಶದ 47 ವರ್ಷದ ಮಹಿಳೆಯೊಬ್ಬಳು ಜಾರ್ಖಂಡ್‌ ನ ಹಜಾರಿಬಾಗ್‌ನ ಖುತ್ರಾ ಗ್ರಾಮಕ್ಕೆ ಬಂದಿರುವ ಘಟನೆ ವರದಿಯಾಗಿದೆ.

ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದ ನಾಲ್ಕು ಮಕ್ಕಳ ತಾಯಿ, ಪಾಕ್‌ ಮಹಿಳೆ ಸೀಮಾ ಹೈದರ್‌ ಅವರ ವಿಚಾರ ಸುದ್ದಿಯಲ್ಲಿರುವಾಗಲೇ ಇದೀಗ ಜಾರ್ಖಂಡ್‌ ನಲ್ಲಿ ಅದೇ ರೀತಿಯ ಘಟನೆ ನಡೆದಿದೆ.

ಪೋಲೆಂಡ್ ದೇಶದ ಬಾರ್ಬರಾ ಪೋಲಾಕ್ ತನ್ನ 6 ವರ್ಷದ ಮಗಳೊಂದಿಗೆ ಇನ್ಸ್ಟಾಗ್ರಾಮ್‌ ಮೂಲಕ ಪರಿಚಯವಾದ ಜಾರ್ಖಂಡ್‌ ನ ಹಜಾರಿಬಾಗ್‌ನ ಖುತ್ರಾ ಗ್ರಾಮದ 35 ವರ್ಷದ ಶಾದಾಬ್ ಮಲ್ಲಿಕ್ ಅವರಿಗಾಗಿ ಭಾರತಕ್ಕೆ ಬಂದಿದ್ದಾರೆ.

ಇನ್ನು ಬಾರ್ಬರಾ ಪೋಲಾಕ್ ಅವರು ಈ ಹಿಂದೆಯೇ ತನ್ನ ಪತಿಯಿಂದ ವಿಚ್ಛೇದನವನ್ನು ಪಡೆದಿದ್ದು, ಮಲ್ಲಿಕ್‌ ಅವರೊಂದಿಗೆ ಪ್ರೇಮವಾದ ಬಳಿಕ, ಇದೀಗ ಇಬ್ಬರು ಮದುವೆಯಾಗಲು ಸಿದ್ದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಜಾರಿಬಾಗ್ ಎಸ್‌ ಡಿಎಂ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.