Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ 11 ಮಂದಿ ಮೃತ.!

 

ಟೆಹರಾನ್:  ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್  ವೈಮಾನಿಕ ದಾಳಿ ನಡೆಸಿದ್ದು, 11 ಜನ ಮೃತಪಟ್ಟಿದ್ದಾರಂತೆ.!ದಾಳಿಯಿಂದ ಸಂಪೂರ್ಣ ಕಟ್ಟಡ ನಾಶವಾಗಿದೆ. ಒಳಗಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರತೆಗೆಯುವ ಹಾಗೂ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಇನ್ನೊಬ್ಬ ಉನ್ನತ ಶ್ರೇಣಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ ರಹೀಮಿ ಹಾಗೂ 7 ಮಂದಿ ಸದಸ್ಯರು ಹತ್ಯೆಯಾದವರಲ್ಲಿ ಸೇರಿದ್ದಾರೆ.

ಮೃತರಲ್ಲಿ 8 ಮಂದಿ ಇರಾನಿಯನ್ನರು, ಇಬ್ಬರು ಸಿರಿಯನ್ನರು ಹಾಗೂ ಓರ್ವ ಲೆಬನೀಸ್ ಸೇರಿದ್ದಾರೆ. ಇವರೆಲ್ಲರೂ ಹೋರಾಟಗಾರರು. ನಾಗರಿಕರು ಯಾರೂ ಮೃತಪಟ್ಟಿಲ್ಲ ಎಂದು ಸಿರಿಯಾದಲ್ಲಿನ ಮೂಲಗಳು ತಿಳಿಸಿವೆ.