Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಇಸ್ಕಾನ್’ ಹರೇ ರಾಮ್-ಹರೇ ಕೃಷ್ಣ ಎಂದು ಹೇಳಿ ಕಟುಕರಿಗೆ ಗೋವುಗಳ ಮಾರಾಟ’-ಮನೇಕಾ ಗಾಂಧಿ

ನವದೆಹಲಿ: ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ದ ಆರೋಪಿಸಿ ನೀಡಿರುವ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿದೆ.

ರಾಷ್ಟ್ರೀಯ ಲೋಕ ದಳ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೇನಕಾ ಗಾಂಧಿ ಹೇಳಿರುವ ಒಂದು ನಿಮಿಷದ ವೀಡಿಯೋ ಹಂಚಿಕೊಂಡಿದ್ದಾರೆ.

ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಯಾರಾದರೂ ಇದ್ದರೆ ಅದು ಇಸ್ಕಾನ್. ಇವರು ಗೋ ಶಾಲೆಗಳನ್ನು ನಡೆಸಲು ಸರ್ಕಾರದಿಂದ ಬೇಕಾದ ಸೌಲಭ್ಯ, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲ ವ್ಯವಸ್ಥೆ ಸಿಗುತ್ತವೆ ಎಂದು ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ

ಇತ್ತೀಚೆಗಷ್ಟೇ ನಾನು ಇಸ್ಕಾನ್ ನ ಅನಂತಪುರದ ಗೋ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಹಸುವೂ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ ಯೋಗ್ಯವಾದ ಹಸುವಾಗಲಿ ಇಲ್ಲವೇ ಕರುಗಳಾಲಿ ಇರಲಿಲ್ಲ. ಎಲ್ಲಾ ಕರುಗಳು ಮಾರಾಟವಾಗಿದೆ ಎಂಬುದೇ ಇದರ ಸಾರಾಂಶ. ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ಅವರ ಜೀವನವಿದೆ ಎಂಬಂತೇ ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.

ಆದರೆ, ಇಸ್ಕಾನ್ ಅವರು ಕಟುಕರಿಗೆ ಮಾರಿದಷ್ಟು ಗೋವುಗಳನ್ನು ಖಂಡಿತವಾಗಿಯೂ ಬೇರೆ ಯಾರೂ ಕೂಡ ಮಾರಿರಲು ಸಾಧ್ಯವೇ ಇಲ್ಲವೇನೋ?!ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು? ಎಂದು ಬಿಜೆಪಿ ಸಂಸದೆ ಮೇನಕಾ ಹೇಳಿರುವ ವೀಡಿಯೋ ವೈರಲ್ ಆಗಿದೆ.