Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಸ್ರೇಲ್ ದಾಳಿಗೆ ಬಲಿಯಾದ ರಾಯಿಟರ್ಸ್ ಛಾಯಾಗ್ರಾಹಕ

ಬೈರುತ್: ಇಸ್ರೇಲ್ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ರಾಯಿಟರ್ಸ್ ಪತ್ರಿಕಾ ಛಾಯಾಗ್ರಾಹಕ ಇಸಾಮ್ ಅಬ್ದಲ್ಲಾ ಬಲಿಯಾಗಿದ್ದಾರೆ. ಪತ್ರಕರ್ತರು ತೆರಳುತ್ತಿದ್ದ ವಾಹನದ ಮೇಲೆ ದಾಳಿಯಾಗಿದೆ. ಪರಿಣಾಮ ಇಸಾಮ್ ಅಬ್ದಲ್ಲಾ ಮೃತಪಟ್ಟು ಇನ್ನುಳಿದ ಆರು ಜನ ಪತ್ರಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯು ಲೆಬನಾನ್‌ನ ದಕ್ಷಿಣ ಪ್ರಾಂತ್ಯದ ಅಲ್ಮಾ ಅಲ್-ಶಾಬ್ ಎಂಬ ಗ್ರಾಮದಲ್ಲಿ ನಡೆದಿದೆ. ಈ ದಾಳಿಯಲ್ಲಿ ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್ಪಿ) ಮತ್ತು ಅಲ್-ಜಜೀರಾ ಟಿವಿ ಚಾನೆಲ್ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಇತರ ಆರು ವರದಿಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.