ಇಸ್ರೇಲ್ ನಲ್ಲಿ ಉದ್ಯೋಗ.. ತಿಂಗಳಿಗೆ 1,37,000 ರೂ. ಸಂಬಳ.!
ದೆಹಲಿ: ಯುದ್ಧದ ಕಾರಣದಿಂದ ಪ್ಯಾಲೇಸ್ಟಿನಿಯನ್ ಕಾರ್ಮಿಕರನ್ನು ಇಸ್ರೇಲ್ ತೆಗೆದುಹಾಕಿದೆ. ಅವರ ಜಾಗದಲ್ಲಿ ಭಾರತೀಯರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ.
ಅದರ ಭಾಗವಾಗಿ ನಿನ್ನೆ 15 ಜನರ ತಂಡ ಭಾರತಕ್ಕೆ ಬಂದಿದ್ದು, ಜನವರಿ 20ರವರೆಗೆ ಹರಿಯಾಣದಲ್ಲಿ ನೇಮಕಾತಿ ಪ್ರಕ್ರಿಯೆ ಜರುಗಲಿದೆ. ಮೇಸ್ತ್ರಿ, ಬೆಂಡರ್, ಟೈಲ್ಸ್ ಕೆಲಸಗಾರರು, ಕಾರ್ಪೆಂಟರ್ ಮತ್ತು ಇತರ ಹುದ್ದೆಗಳಿಗೆ ಮಾಸಿಕ 1.37 ಲಕ್ಷ ರೂ. ವೇತನ ಮತ್ತು ತಿಂಗಳಿಗೆ 16,515 ರೂ. ಬೋನಸ್ ಇರುತ್ತದೆ. ಯುಪಿಯಲ್ಲೂ ನೇಮಕಾತಿ ಪ್ರಕ್ರಿಯೆ ನಡೆಯಲಿದೆಯಂತೆ.!