ಇಸ್ರೇಲ್ ಮೇಲೆ ಪ್ಯಾಲೆಸ್ತೇನ್ ದಾಳಿ :ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ?
ಬೆಂಗಳೂರು : ‘ಬಾಂಬ್‌ಗಳು,ಯುದ್ಧಭೀತಿಯಿಂದ ಜಾಗತಿಕ ಭೂಪಟದಲ್ಲಿ ಒಂದು ದೇಶ ಕಣ್ಮರೆಯಾಗುತ್ತದೆ’ಎಂದು ೨ ತಿಂಗಳ ಹಿಂದೆಯಷ್ಟೇ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಈಗ ಇಸ್ರೇಲ್-ಪ್ಯಾಲೆಸ್ತೇನ್ ನಡುವೆ ಭೀಕರ ಯುದ್ಧ ಆರಂಭವಾಗಿದ ಬೆನ್ನಲ್ಲೇ ಸ್ವಾಮೀಜಿಗಳ ಭವಿಷ್ಯ ನಿಜವಾಗುತ್ತಾ ಎನ್ನುವ ಚರ್ಚೆಗಳು ಆರಂಭವಾಗಿವೆ. ಇನ್ನು ಇಸ್ರೇಲ್ ಮೇಲೆ ಹಮಾಸ್ ಉಗ್ರರರು ದಾಳಿ ನಡೆಸಿದ್ದು ಇಸ್ರೇಲ್ ಕೂಡಾ ಪ್ರತಿದಾಳಿ ಮಾಡುತ್ತಿದೆ. ಇಸ್ರೇಲ್‌ಗೆ ಭಾರತ ಸೇರಿ ಹಲವು ರಾಷ್ಟ್ರಗಳು ಬೆಂಬಲಕ್ಕೆ ನಿಂತಿವೆ. ಇದರ ನಡುವೆ ಸ್ವಾಮೀಜಿ ಭವಿಷ್ಯ ನಿಜವಾಗತ್ತಾ ಎನ್ನುವ ಚರ್ಚೆ ಜೋರಾಗಿದೆ.