ಇಸ್ರೇಲ್-ಹಮಾಸ್ ಸಂಘರ್ಷ| ತೈಲ ಮಾರುಕಟ್ಟೆ ಮೇಲೆ ಕರಿನೆರಳು
ಪ್ರಸ್ತುತ ಇಸ್ರೇಲ್ ಮತ್ತು ಹಮಾಸ್ನಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಕಚ್ಛಾ ತೈಲ ಬೆಲೆಗಳ ಮೇಲೆ ವ್ಯಾಪಕವಾದ ಪರಿಣಾಮ ಬೀರಿದೆ. ಇಳಿಕೆ ಹಾದಿಯಲ್ಲಿದ್ದ ಕಚ್ಚಾ ತೈಲ ದರದ ಮೇಲೆ ಯುದ್ಧದ ಕರಿನೆರಳು ಬಿದ್ದಿದೆ.ಇಸ್ರೇಲ್ ಮತ್ತು ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಯುದ್ಧವು ಸಾವು, ನೋವುಗಳ ಜೊತೆಗೆ ಅನೇಕ ನಷ್ಟಗಳನ್ನು ಉಂಟು ಮಾಡಿದೆ. ರಾಷ್ಟ್ರ-ರಾಷ್ಟ್ರಗಳ ನಡುವೆ ನಡೆಯುವ ಈ ವಿದ್ಯಮಾನ ಆ ದೇಶದ ಒಳಗೆ ಅಲ್ಲದೇ ಜಾಗತಿಕವಾಗಿ ಕೂಡ ಪರಿಣಾಮ ಬೀರುತ್ತದೆ. ಇದೊಂದು ಸಾಮಾನ್ಯ ಸಂಗತಿಯಾಗಿದೆ. ಅದರಲ್ಲೂ ಈ ವಿದ್ಯಮಾನಗಳು ಇಂಧನದ ಮೇಲೆ, ಬಂಗಾರದ ದರ, ಕೃಷಿ, ಕೈಗಾರಿಕೆ ಹೀಗೆ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ.ರಷ್ಯಾ ಉಕ್ರೇನ್ ಯುದ್ಧ ನಡೆದಾಗಲೂ ಇಂತದ್ದೇ ಪರಿಣಾಮ ಜಾಗತಿಕವಾಗಿ ಎದುರಾಗಿತ್ತು. ಈಗ ಇಸ್ರೇಲ್ (Isrel) ಮತ್ತು ಹಮಾಸ್ (Hamas) ನಡುವಿನ ಪರಿಸ್ಥಿತಿ ಇಂತಹದ್ದೇ ಮತ್ತೊಂದು ಬಿಕ್ಕಟ್ಟನ್ನು ಸೃಷ್ಠಿ ಮಾಡಿದೆ.