ಇ.ಪಿ.ಎಸ್ ಪಿಂಚಣಿದಾರರು ಜೀವನ್ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ
ದಾವಣಗೆರೆ, ಇ.ಪಿ.ಎಸ್ 1995 ರ ಪಿಂಚಣಿದಾರ ಫಲಾನುಭವಿಗಳು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದ್ದು, ಆದರೆ ಈ ಸಾಲಿನಲ್ಲಿ ಜೀವನ್ ಪ್ರಮಾಣ ಪತ್ರದ ಸಲ್ಲಿಕೆಯಲ್ಲಿನ ವಿಳಂಬವು ಪಿಂಚಣಿಯ ನಿಲುಗಡೆಗೆ ಕಾರಣವಾಗುತ್ತದೆ.
ಇ.ಪಿ.ಎಫ್.ಒಗೆ ಜೀವನ್ ಪ್ರಮಾಣ ಪತ್ರವನ್ನು ವೆಬ್‍ಸೈಟ್ http://jeevanpramaan.gov.in/package/download ಮೂಲಕ ಸಲ್ಲಿಸಿದ ನಂತರ ಬಾಕಿ ಪಿಂಚಣಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಯುಟ್ಯೂಬ್ ವೀಡಿಯೊ ಲಿಂಕ್ https://youtu.be/dobSgak421Q?si=eVEKWUCJToELdFoU FAT ಮೂಲಕ ಜೀವನ್ ಪ್ರಮಾಣ ಪತ್ರ ಸಲ್ಲಿಕೆಯ ವಿಧಾನವನ್ನು ತಿಳಿಯಬಹುದು ಎಂದು ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.