Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈಜಲು ಹೋಗಿ ಮೂವರು ಯುವಕರು ನೀರುಪಾಲು.!

 

ಶಿವಮೊಗ್ಗ: SSLC ವಿದ್ಯಾರ್ಥಿಗಳು ಮೂವರು ಈಜಲು ಹೋಗಿ ನೀರುಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತುಂಗಾ ನದಿಯ ರಾಮ ಮಂಟಪದ ಬಳಿ ನಡೆದಿದೆ.

ಮೃತರು ರಫನ್, ಇಯನ್ ಮತ್ತು ಅರ್ಫದ್ ಮೃತ ಬಾಲಕರು ಎಂದು ತಿಳಿದುಬಂದಿದೆ. ಇವರು ರಂಜಾನ್ ಉಪವಾಸ ಮುಗಿಸಿದ ನಂತರ ತುಂಗಾ ನದಿಯಲ್ಲಿ ಈಡಾಜಲೆಂದು ರಫನ್, ಇಯನ್ ಮತ್ತು ಅರ್ಫದ್ ರಾಮ ಮಂಟಪದ ಬಳಿ ಹೋಗಿದ್ದಾರೆ. ಅದರಂತೆ ಈಜಲು ನೀರಿಗೆ ಇಳಿದಾಗ ಮೂವರು ಕೂಡ ನೀರುಪಾಲಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಮೂವರು ಬಾಲಕರ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ತೀರ್ಥಹಳ್ಳಿ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ