Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈ ಒಂದು ಡೈಲಾಗ್ ನಿಂದ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾಗೆ ಸಂಕಷ್ಟ..!

ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾಗೆ ಸಂಕಷ್ಟ ಎದುರಾಗಿದೆ. ವನ್ಯಜೀವಿ ಸಂರಕ್ಷಣಾ ಒಕ್ಕೂಟ ರಾಜ್ಯಪಾಲರು ಹಾಗೂ ಸಿಎಂ ಸಿದ್ದರಾಮಯ್ಯಗೆ ಈ ಬಗ್ಗೆ ದೂರು ನೀಡಿದ್ದಾರೆ. ಸಿನಿಮಾ ಟ್ರೇಲರ್‌ನಲ್ಲಿ ಇವೆಲ್ಲಾ ಹಾವು ಇದ್ದಂಗೆ, ವಿಷ ಇಲ್ಲ ಅಂದ್ರೆ ಹಿಡಿಬೇಕು, ವಿಷ ಇದ್ದರೆ ಹೊಡೀಬೇಕು ಎನ್ನೋ ಡೈಲಾಗ್ ಇದೆ.

ಇದು ವನ್ಯಜೀವಿಗಳ ಬಗ್ಗೆ ಅಪಕ್ವ ಸಂಭಾಷಣೆ, ಈ ರೀತಿ ಹಾವುಗಳನ್ನು ಸಾಯಿಸಲು ಪ್ರೇರಣೆ ನೀಡುವುದು ತಪ್ಪು ಎಂದು ಒಕ್ಕೂಟ ಹೇಳಿದೆ. ಮೇಲ್ ಮೂಲಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಸಿದ್ದರಾಮಯ್ಯಗೆ ದೂರು ನೀಡಲಾಗಿದೆ.