Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈ ಕಾರಣಕ್ಕೆ ಮಧುಮೇಹಿಗಳಿಗೆ ಬೀಗ್ರೂಟ್ ರಾಮಬಾಣವಂತೆ.!

 

ರಕ್ತಹೀನತೆಯಿಂದ ನರಳುವವರು ಕಡ್ಡಾಯವಾಗಿ ಬೀಟ್‌ರೂಟ್ ತಿನ್ನಬೇಕು. ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಬೀಟ್‌ರೂಟ್‌ನಲ್ಲಿ ಹೆಚ್ಚಾಗಿ ಐರನ್, ಫೋಲಿಕ್ ಆಮ್ಲ, ಫೈಬರ್, ಪೊಟ್ಯಾಷಿಯಂ ಇರುತ್ತದೆ.

ಬೀಟ್‌ರೂಟ್‌ನಲ್ಲಿ ಅಧಿಕ ಕಾರ್ಬೋಹೈಡ್ರೇಟ್‌ ಮಟ್ಟವಿರಬಹುದು ಹಾಗೂ ತರಕಾರಿಗಳಲ್ಲೇ ಅತಿ ಹೆಚ್ಚು ಸಕ್ಕರೆ ಅಂಶವಿದೆ. ಆದರೆ, ಬೀಟ್‌ರೂಟ್‌ನಲ್ಲಿ ಹಲವಾರು ಪೋಷಕಾಂಶಗಳಿದ್ದು, ಅದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ರಕ್ತದೊತ್ತಡ ಕಡಿಮೆ ಮಾಡುತ್ತದೆ

ಬೀಟ್‌ರೂಟ್‌ ಜ್ಯೂಸ್‌ ಕುಡಿಯುವುದರಿಂದ ಕೆಲವೇ ಗಂಟೆಗಳಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಒಂದು ಲೋಟ ಬೀಟ್‌ರೂಟ್‌ ಜ್ಯೂಸ್‌ನಿಂದ 4 – 5 ಅಂಶಗಳಷ್ಟು ಸಂಕೋಚನ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಒಂದು ವರದಿ ಹೇಳಿದೆ.

ಸಿಸ್ಟೋಲಿಕ್ ಹಾಗೂ ಡಯಾಸ್ಟೋಲಿಕ್ ರಕ್ತದೊತ್ತಡ ನಿಯಂತ್ರಿಸುತ್ತದೆ ಬೀಗ್ರೂಟ್ ಟೈಪ್ 2 ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಇನ್ಸುಲಿನ್ ಸಂವೇದನೆ ಸುಧಾರಿಸುತ್ತದೆ. ಎಂಡೋಥೀಲಿಯಲ್ ಕಾರ್ಯ ಉತ್ತಮಗೊಳಿಸುತ್ತದೆ

ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ವ್ಯಾಯಾಮ-ಪ್ರೇರಿತ ಆಕ್ಸಿಡೇಟಿವ್ ಒತ್ತಡ ನಿವಾರಿಸುತ್ತದೆ