ಈ ಗ್ರಾಮಗಳ ಪಂಪ್‌ಸೆಟ್‌ಗಳಿಗೆ ಡಿ.2ರ ಬೆಳಿಗ್ಗೆ 4ರಿಂದ 10 ಗಂಟೆಯವರೆಗೆ ವಿದ್ಯುತ್ ಸರಬರಾಜು.!
ಹೊಸಪೇಟೆ: 110/11ಕೆ.ವಿ ಸಂಕ್ಲಾಪುರ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಡಿ.2ಕ್ಕೆ ಹೊಸಪೇಟೆ ಗ್ರಾಮೀಣ ಶಾಖಾ ವ್ಯಾಪ್ತಿಗೆ ಬರುವ ಕಾಕುಬಾಳು, ಗುಂಡ್ಲುವದ್ದಿಗೇರೆ, ಕಲ್ಲಹಳ್ಳಿ, ರಾಜಾಪುರ, ಬಸವನದುರ್ಗ ಮತ್ತು ನಾಗೇನಹಳ್ಳಿ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್ ಸೆಟ್ ರೈತರಿಗೆ ವಿದ್ಯುತ್ ವ್ಯತ್ಯಯ ಆಗಲಿದ್ದು, ಈ ಭಾಗದ ರೈತರ ಪಂಪ್‌ಸೆಟ್‌ಗಳಿಗೆ ಅಂದು ಬೆಳಿಗ್ಗೆ 4 ರಿಂದ 10 ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗಲಿದೆ.
ಎಲ್ಲಾ ರೈತ ಬಾಂಧವರು ಹಾಗೂ ಗ್ರಾಹಕರು ಸಹಕರಿಸಬೇಕಾಗಿ ಜೆಸ್ಕಾಂ ಹೊಸಪೇಟೆ ಗ್ರಾಮೀಣ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.