Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈ ಬಾರಿ ಮೈಸೂರು ದಸರಾದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರು:  ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸದಲ್ಲಿ ಲೋಹದ ಹಕ್ಕಿಗಳ ಕಲರವ ಕೇಳಿಸಲಿದೆ. ದಸರಾ ಉತ್ಸವದಲ್ಲಿ ಏರ್‌ಶೋ ನಡೆಸುವುದಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಅನುಮತಿ ನೀಡಿದೆ.

ಅ.15ರಂದು ನಾಡಹಬ್ಬ ದಸರಾ ಉದ್ಘಾಟನೆಯಾಗಲಿದ್ದು, 14 ಆನೆಗಳ ಜಂಬೂ ಸವಾರಿಯೊಂದಿಗೆ ಇದು ಮುಕ್ತಾಯವಾಗಲಿದೆ.

ಈ ನಡುವೆ ದಸರಾ ವೇಳೆ ವೈಮಾನಿಕ ಪ್ರದರ್ಶನ ನಡೆಸುವುದಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರವು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪ್ರಸ್ತಾವನೆ ಕಳಹಿಸಿದ್ದು, ಇದೀಗ ಅನುಮತಿ ದೊರೆತಿದೆ. ಈ ಹಿನ್ನೆಲೆ ಮೈಸೂರು ಡಿಸಿ ಡಾ. ರಾಜೇಂದ್ರ ವಾಯುಪಡೆ ಅಧಿಕಾರಿಗಳ ಜತೆ ಬನ್ನಿ ಮಂಟಪಕ್ಕೆ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ್ದಾರೆ.