Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಕಾಂಗ್ರೆಸ್ ನಿಲುವೇನು?- ಕಟೀಲ್ ಪ್ರಶ್ನೆ

ಬೆಂಗಳೂರು: ನಿನ್ನೆ ಉದಯನಿಧಿ ಸ್ಟಾಲಿನ್ ಅವರು ಸನಾತನ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸನಾತನ, ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿದ್ದಾರೆ. ತಮಿಳುನಾಡಿನ ರಾಜಕಾರಣದಲ್ಲಿ ನಿರಂತರವಾಗಿ ಆರ್ಯ- ದ್ರಾವಿಡ ಎಂಬ ಸಮಸ್ಯೆಯನ್ನು ಹುಟ್ಟು ಹಾಕಿ ಅದರ ಮೂಲಕ ರಾಜಕಾರಣ ಮಾಡುವುದನ್ನು ಕಂಡಿದ್ದೇವೆ ಎಂದರು.

ಆ ರಾಜಕಾರಣದ ಮುಂದುವರೆದ ಭಾಗವಾಗಿ ಸನಾತನ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂದ ಅವರು, ಡಿಎಂಕೆ ಪಕ್ಷವು ಐಎನ್‍ಡಿಐಎ ಜೊತೆ ಸೇರಿದೆ. ಐಎನ್‍ಡಿಐಎ ಅಂಗ ಪಕ್ಷಗಳು ಇದರ ಕುರಿತು ಏನು ಹೇಳುತ್ತಾರೆಂದು ಸ್ಪಷ್ಟಪಡಿಸಲು ಅವರು ಒತ್ತಾಯಿಸಿದರು.

ಈ ರಾಜ್ಯದಲ್ಲಿ ಐಎನ್‍ಡಿಐಎ ಪಾಲುದಾರಿಕೆ ಹೊಂದಿದ ಕಾಂಗ್ರೆಸ್ ನಿಲುವೇನು? ಇದನ್ನು ಸಮರ್ಥಿಸುತ್ತಾರಾ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನು ಹೇಳುತ್ತಾರೆ? ಎಂದು ಕೇಳಿದರು.

ಭಾರತದ ಆತ್ಮ ಹಿಂದುತ್ವ. ಈ ದೇಶದ ಬಹುಸಂಖ್ಯಾತ ಜನರು ಹಿಂದೂಗಳು. ಭಾರತವನ್ನೇ ಹಿಂದೂ ರಾಷ್ಟ್ರ ಎಂದು ಕರೆಯಲಾಗುತ್ತಿದೆ. ಇಲ್ಲಿ ಇರುವ ಧರ್ಮ ಒಂದೇ; ಅದು ಹಿಂದೂ ಧರ್ಮ. ಬಾಕಿ ಉಳಿದುದೆಲ್ಲ ಮತಗಳು ಎಂದು ವಿಶ್ಲೇಷಿಸಿದರು.
ಇಲ್ಲಿನ ಆತ್ಮ ಹಿಂದುತ್ವ. ಇಲ್ಲಿನ ಸಂಸ್ಕøತಿ ಶ್ರೇಷ್ಠವಾದುದು. ಭಾರತದ ಸನಾತನ ಸಂಸ್ಕøತಿಯನ್ನು ಜಗತ್ತು ಒಪ್ಪಿಕೊಳ್ಳುತ್ತಿದೆ. ರಾಜಕಾರಣಕ್ಕಾಗಿ ಇಂಥ ಹೇಳಿಕೆ ಸರಿಯಲ್ಲ. ಇದನ್ನು ಖಂಡಿಸುವುದಾಗಿ ತಿಳಿಸಿದರು.