ಉದ್ಯೋಗಕ್ಕೆ ಆಯ್ಕೆಯಾಗಲು ರೆಸ್ಯೂಮ್ ನಲ್ಲಿ ಇರಬೇಕಾದ ಮುಖ್ ಅಂಶಗಳು..!
ನಿಮ್ಮ ರೆಸ್ಯೂಮ್ ಉತ್ತಮವಾಗಿರಬೇಕು ಅಂದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
- ನಿಮ್ಮ ರೆಸ್ಯೂಮ್ ತಯಾರಿಸುವ ಮುನ್ನ ಇತರರ ರೆಸ್ಯೂಮ್ಗಳನ್ನು ಒಮ್ಮೆ ಪರಿಶೀಲಿಸಿ. ಒಬ್ಬೊಬ್ಬರ ರೆಸ್ಯೂಮ್ನಿಂದಲೂ ನೀವು ಒಂದೊಂದು ಐಡಿಯಾ ಪಡೆಯಬಹುದು.
- ಅನಗತ್ಯ ಅಂಶಗಳನ್ನು ಬರೆಯಬೇಡಿ. ಉದ್ಯೋಗದಾತರು ಸಾಮಾನ್ಯವಾಗಿ ಅಪ್ಲಿಕೇಶನ್ಗಳನ್ನು ಪರಿಶೀಲಿಸಲು ಸೀಮಿತ ಸಮಯವನ್ನು ಹೊಂದಿರುತ್ತಾರೆ. ಹೀಗಾಗಿ ರೆಸ್ಯೂಮ್ ಸಂಕ್ಷಿಪ್ತವಾಗಿರಲಿ.
- ನಿಮ್ಮ ರೆಸ್ಯೂಮ್ನಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಕಾಣುವಂತಹ ಫಾಂಟ್ ಹಾಗೂ ಫಾಂಟ್ ಸೈಜ್ ಬಳಸಿ.
-
ರೆಸ್ಯೂಮ್ನಲ್ಲಿ ನಿಮ್ಮ ಭಾವಚಿತ್ರ ಹಾಕುವುದಿದ್ದರೆ ಸೆಲ್ಫಿ ಫೋಟೋ ಹಾಕಬೇಡಿ.
-
ಕೆಲಸದ ವಿಚಾರದಲ್ಲಿ ನಿಮ್ಮ ಸಾಧನೆಗಳನ್ನು ಉಲ್ಲೇಖಿಸಲು ಮರೆಯದಿರಿ. ಶಿಕ್ಷಣ ಮುಗಿಸಿ ಮೊದಲ ಬಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ವಿದ್ಯಾಭ್ಯಾಸದ ವೇಳೆ ನೀವು ಯಾವುದಾದರೂ ಕೋರ್ಸ್ ಮಾಡಿ ಅಲ್ಲಿ ಸಾಧನೆ ಮಾಡಿದ್ದರೆ ಅದನ್ನೂ ಸೇರಿಸಬಹುದು.
-
ನಿಮ್ಮ ಶಿಕ್ಷಣ ಅಥವಾ ವಿದ್ಯಾರ್ಹತೆ ಕುರಿತು ನಿಖರ ಡೇಟಾ ಇರಲಿ. ನಿಮ್ಮ ಕೆಲಸದ ಅನುಭವ ಮತ್ತು ಕೌಶಲ್ಯಗಳ ಬಗ್ಗೆ ಸೂಕ್ತವಾದ ಮಾಹಿತಿಯನ್ನು ಸೇರಿಸಿ.
-
ಯಾವುದೇ ಕಾರಣಕ್ಕೂ ಯಾವುದೇ ಸುಳ್ಳು ಮಾಹಿತಿ ಬರೆಯಬೇಡಿ. ಆ ಸಮಯಕ್ಕೆ ನೀವು ಬಚಾವಾದರೂ ಭವಿಷ್ಯದಲ್ಲಿ ಸಿಕ್ಕ ಕೆಲಸವನ್ನೂ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.