ಎಂ ಎಸ್ ಧೋನಿ ಹುಕ್ಕಾ ಸೇದುತ್ತಿರುವ ವೀಡಿಯೋ ವೈರಲ್
ಮುಂಬೈ: ಕ್ರಿಕೆಟ್ ದೇವರು ಎಂದೇ ಪ್ರಸಿದ್ದಿಯನ್ನು ಪಡೆದಿರುವ ಮಹೇಂದ್ರ ಸಿಂಗ್ ದೋನಿ ಹುಕ್ಕಾ ಸೇದುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕುರಿತು ಇದೀಗ ಪರ ವಿರೋಧ ಅಭಿಪ್ರಾಯಗಳನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಧೋನಿ ಹುಕ್ಕಾ ಸೇದುತ್ತಿರುವುದನ್ನು ಕಾಣಬಹುದಾಗಿದೆ. ಗೆಳೆಯರ ಗುಂಪಿನಲ್ಲಿರುವ ಧೋನಿ, ಹುಕ್ಕಾ ಸೇದಿ ಹೊಗೆಬಿಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.
ಎಂಎಸ್ ಧೋನಿ ಯುವ ಆಟಗಾರರೊಂದಿಗೆ ಬೆರೆಯಲು ಹುಕ್ಕಾ ಸೆಷನ್ಗಳನ್ನು ಮಾಡುತ್ತಿದ್ದರು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್ ಬೈಲಿ ಈ ಹಿಂದೆಯೇ ಹೇಳಿಕೊಂಡಿದ್ದರು.
ಇದೀಗ ಧೋನಿ ಹುಕ್ಕಾ ಸೇದಿರುವ ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ಆಟಗಾರರನ್ನು ಈ ರೀತಿಯಾಗಿ ನೋಡಿರುವ ಅಭಿಮಾನಿಗಳು ಪರ- ವಿರೋಧದ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರಹಾಕುತ್ತಿದ್ದಾರೆ.