ಎಕ್ಸ್ ಜಾಗತಿಕವಾಗಿ ಡೌನ್: ಫೀಡ್ ನ ಬದಲು ‘ವೆಲ್ ಕಮ್ ಟು ಟೈಮ್ಲೈನ್ ‘ ಸಂದೇಶ
ನವದೆಹಲಿ: ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ಇಂದು ಜಾಗತಿಕವಾಗಿ ಸ್ಥಗಿತಗೊಂಡಿರುವ ಅನುಭವ ಉಂಟಾಗಿದೆ.
ಗುರುವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ತಾಂತ್ರಿಕ ಅಡಚಣೆ ಉಂಟಾಗಿದ್ದು, ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ಫೀಡ್ನಲ್ಲಿಯೂ ಸಾಮಾನ್ಯ ಟ್ವೀಟ್ಗಳ ಬದಲಿಗೆ ‘ನಿಮ್ಮ ಟೈಮ್ಲೈನ್ಗೆ ಸ್ವಾಗತ’ ಎಂದು ತೋರಿಸುತ್ತಿದೆ.
ಔಟ್ಟೇಜ್ ಟ್ರ್ಯಾಕಿಂಗ್ ವೆಬ್ಸೈಟ್ Downdetector.com ಪ್ರಕಾರ, ಎಕ್ಸ್ ಡೌನ್ ಆಗಿರುವ ಬಗ್ಗೆ ಜನರು ವರದಿ ಮಾಡಿದ್ದಾರೆ.
ಮೈಕ್ರೋಬ್ಲಾಗಿಂಗ್ ಸೈಟ್ ಸ್ಥಗಿತಗೊಂಡ ಕಾರಣ ಬಳಕೆದಾರರಿಗೆ ಪ್ರವೇಶಿಸಲಾಗುತ್ತಿಲ್ಲ. ಈ ಸಮಸ್ಯೆಗೆ ಕಾರಣವೇನು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಎಕ್ಸ್ ಸ್ಥಗಿತವನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಇಂತಹ ತಾಂತ್ರಿಕ ತೊಂದರೆ ಕಂಡುಬಂದಿದೆ.