Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಎಳ್ಳೆಣ್ಣೆ ಯ ಆರೋಗ್ಯ ಪ್ರಯೋಜನ

ಎಳ್ಳೆಣ್ಣೆಯಿಂದ ಸ್ನಾನ ಮಾಡುವುದರಿಂದ ದೇಹದ ಚರ್ಮ ನಯವಾಗಿ ಆರೋಗ್ಯಕರವಾಗಿ ಯಾವುದೇ ಕಾಲದಲ್ಲೂ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತದೆ.

ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ.ಮಹಿಂದೆ ನೋವು ನಿವಾರಕ ಇದು ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ ಒಂದು ಚಮಚ ಎಣ್ಣೆ ಹಾಕಿಕೊಂಡರೆ ದೇಹ ತಂಪಾಗಿರುತ್ತದೆ ಹಾಗೂ ಕಣ್ಣಿನ ಬದಿಯಲ್ಲಿ ಬರುವ ಮಡ್ಡಿ ದೂರವಾಗುತ್ತದೆ.

ಎಳ್ಳು ಮನುಷ್ಯನ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ತಂದುಕೊಡುತ್ತದೆ. ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ದೇಹದ ಉಷ್ಣಾಂಶ ತಗ್ಗುತ್ತದೆ. ಬೇಸಿಗೆಯಲ್ಲಿ ವಿಪರೀತ ಶಕೆ ಮತ್ತು ಚಳಿಗಾಲದಲ್ಲಿ ಮೈ ನಡುಗುವುದು ಮನುಷ್ಯನಿಗೆ ಸಾಮಾನ್ಯ ವಿಚಾರ.

ಚಳಿಗಾಲದಲ್ಲಿ ಕೈ, ಕಾಲು ಸೆಳೆತ ಎನ್ನುವವರು, ಮಾಯಿಶ್ಚರೈಸರ್ ಹಚ್ಚಿದರೂ ಸ್ವಲ್ಪ ಹೊತ್ತಿಗೆ ಒಣಚರ್ಮ ಹೊಂದುವವರು ಒಂದು ಚಮಚ ಎಳ್ಳೆಣ್ಣೆಯನ್ನು ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿ ಕೈ ಕಾಲಿಗೆ ಮಸಾಜು ಮಾಡಬೇಕು. ಇದರಿಂದ ದಿನವಿಡೀ ತ್ವಚೆ ಮೃದುವಾಗಿರುತ್ತದೆ.ಅಡುಗೆಗೆ ಈ ಎಣ್ಣೆಯನ್ನು ಬಳಸಬೇಡಿ. ದೀಪದೆಣ್ಣೆಗೆ ಬಳಸುವ ಎಳ್ಳೆಣ್ಣೆ ಸೇವಿಸಲು ಅರ್ಹವಾದುದಲ್ಲ. ಹಾಗಾಗಿ ಅಡುಗೆಯ ಎಳ್ಳೆಣ್ಣೆ ಎಂದೇ ಕೇಳಿ ಖರೀದಿಸಿ.