ಏಕಕಾಲದಲ್ಲಿ 3,066 ಪೋಷಕರು ಕಥೆ ಹೇಳುವ ಮೂಲಕ ಚೀನಾದ ವಿಶ್ವ ದಾಖಲೆ ಮುರಿದ ಪುಣೆ
ಪುಣೆ: ಏಕಕಾಲದಲ್ಲಿ 3,066 ಪೋಷಕರು ಕಥೆ ಹೇಳುವ ಮೂಲಕ ಈ ಹಿಂದೆ ಚೀನಾ ಮಾಡಿದ್ದ ವಿಶ್ವ ದಾಖಲೆಯನ್ನು ಪುಣೆ ಹೊಸ ದಾಖಲೆಯನ್ನು ಮಾಡಿದೆ.
ಡಿ. 16 ರಿಂದ 24 ರವರೆಗೆ ಫರ್ಗುಸನ್ ಕಾಲೇಜು ಮೈದಾನದಲ್ಲಿ ನಡೆದ ಪುಣೆ ಮುನ್ಸಿಪಲ್ ಕಾರ್ಪೋರೇಷನ್ ಹಾಗೂ ಪುಣೆ ಪುಸ್ತಕೋತ್ಸವ ಆಯೋಜಿಸಿದ್ದ ಸಾಮೂಹಿಕ ಕಥೆ ಹೇಳುವ ಕಾರ್ಯಕ್ರಮವಾದ ‘ಬಾಲಕ್-ಪಾಲಕ್’ ಎಂಬ ದಾಖಲೆ ಮುರಿಯುವ ಕಾರ್ಯಕ್ರಮದಲ್ಲಿ 3,066 ಪೋಷಕರು ಪಾಲ್ಗೊಂಡಿದ್ದಾರೆ. ‘ಶಾಂತತಾ… ಪುಣೇಕರ್ ಓದುತ್ತಿದ್ದಾನೆ’ ಎಂಬ ವಿನೂತನ ಅಭಿಯಾನದಲ್ಲಿ ಅಷ್ಟೊಂದು ಬೃಹತ್ ಸಂಖ್ಯೆಯ ಪೋಷಕರು ಭಾಗವಹಿಸಿ ಏಕಕಾಲದಲ್ಲಿ ತಮ್ಮ ಮಕ್ಕಳಿಗೆ ಕಥೆಗಳನ್ನು ಹೇಳಿದರು.
3,066 ಪೋಷಕರು ಕಥೆ ಹೇಳುವ ಮೂಲಕ ಚೀನಾವು 2015 ರಲ್ಲಿ ಸೃಷ್ಟಿ ಮಾಡಿದ್ದ 2,479 ಪೋಷಕರು ಕಥೆ ಹೇಳಿದ ದಾಖಲೆಯನ್ನು ಮುರಿದಿದೆ. ಪುಣೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಡ್ರಮ್ಸ್ ನೊಂದಿಗೆ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಹಾಗೂ ಮೈದಾನದಲ್ಲಿ “ಮೈದಾನ ವಂದೇ ಮಾತರಂ” ಮತ್ತು “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಗಳು ನೆರೆದಿದ್ದವರನ್ನು ರೋಮಾಂಚನಗೊಳಿಸಿತ್ತು.