Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಏರ್ ಇಂಡಿಯಾದ ಹೊಸ ಲೋಗೋ ಅನಾವರಣ

ನವದೆಹಲಿ: ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೋವನ್ನು ಅನಾವರಣ ಮಾಡಿದ್ದು, ಏರ್ ಇಂಡಿಯಾ ಹೊಸ ಲೋಗೋಗೆ ‘ದಿ ವಿಸ್ತಾ’ ಎಂದು ನಾಮಕರಣ ಮಾಡಲಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಸ್ವಾಧೀನಪಡಿಸಿಕೊಂಡ ಒಂದೂವರೆ ವರ್ಷ ಆದ ಬಳಿಕ ಸಂಸ್ಥೆಗೆ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಿದೆ.

ಇನ್ನು ವಿಮಾನಯಾನ ಸಂಸ್ಥೆಯು ತನ್ನ ಹೊಸ ಬಾಲ ವಿನ್ಯಾಸ ಮತ್ತು ಥೀಮ್ ಹಾಡನ್ನು ಕೂಡ ಬಹಿರಂಗಪಡಿಸಿದ್ದು, ಏರ್ ಇಂಡಿಯಾ ಒಂದು ವ್ಯಾಪಾರವಲ್ಲ, ಟಾಟಾ ಸಮೂಹಕ್ಕೆ ಇದು ಉತ್ಸಾಹ ಈ ಉತ್ಸಾಹವು ರಾಷ್ಟ್ರೀಯ ಮಿಷನ್ ಆಗಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ.

ಇನ್ನು ಏರ್ ಇಂಡಿಯಾವನ್ನು ವಿಶ್ವದರ್ಜೆಯ ವಿಮಾನಯಾನ ಮಾಡುವ ಪಯಣ ಈಗಷ್ಟೇ ಆರಂಭವಾಗಿದ್ದು, ಏರ್ ಇಂಡಿಯಾ ತನ್ನ ರೀಬ್ರಾಂಡಿಂಗ್ ಅನ್ನು ಅಪಾರ ವಿಶ್ವಾಸದೊಂದಿಗೆ ಮಾಡಿದೆ ಎಂದು ಹೇಳಿದ್ದಾರೆ.